LATEST NEWS
ಮಹಾಲಕ್ಷ್ಮೀ ಕೋಅಪರೇಟಿವ್ ಬ್ಯಾಂಕ್ ಅವ್ಯವಹಾರ ಆರೋಪ – ಆಣೆ ಪ್ರಮಾಣ ರದ್ದು
ಉಡುಪಿ ನವೆಂಬರ್ 09: ಮಲ್ಪೆ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಕರಂಬಳ್ಳಿ ದೇವಾಲಯದಲ್ಲಿ ಇಂದು ನಿಗದಿಯಾಗಿದ್ದ ಆಣೆ ಪ್ರಮಾಣ ಕೊನೆ ಕ್ಷಣದಲ್ಲಿ ರದ್ದಾಗಿದೆ.
ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕರಾದ ಶರತ್ ಕುಮಾರ್ ಶೆಟ್ಟಿ ಮತ್ತು ಸಿಬ್ಬಂದಿ ವರ್ಗದವರು ಕರಂಬಳ್ಳಿ ಶ್ರೀ ವೆಂಕಟರಮಣ ಮುಖ್ಯ ಪ್ರಾಣ ದೇವರ ಸನ್ನಿಧಿಯಲ್ಲಿ ಪ್ರಮಾಣಕ್ಕೆ ಬಂದು, ಯಾವುದೇ ಆಣೆ ಪ್ರಮಾಣ ಮಾಡದೆ ಬದಲಾಗಿ ಸಿಬ್ಬಂದಿಗಳ ಜೊತೆ ದೇವರ ಮುಂದೆ ಪ್ರಾರ್ಥನೆ ಮಾಡಿ ಪ್ರಾರ್ಥನೆಗೆ ಸೀಮಿತಗೊಳಿಸಿ ತೆರಳಿದರು.
ಮಹಾಲಕ್ಷ್ಮಿ ಕೋ – ಓಪರೇಟಿವ್ ಬ್ಯಾಂಕ್ ಲಿ. ಇವರಿಂದ ಅನ್ಯಾಯಕ್ಕೊಳಗಾದ ಸಂತೃಸ್ಥರು ಲಿಖಿತವಾಗಿ ತಾವು ಪಡೆದ ಹಣವನ್ನು ಬ್ಯಾಂಕ್ ನ ನಿಯಮದಂತೆ ಬಡ್ಡಿ ಸಮೇತ ಪಾವತಿಸಲು ಬದ್ದರಿದ್ದೇವೆ. ಇದಕ್ಕೆ ನಮಗೆ ನ್ಯಾಯ ಒದಗಿಸಬೇಕು ಎಂದು ದೇವರ ಮುಂದೆ ಪ್ರಾರ್ಥಿಸಿದರು. ಮುಂದಿನ ದಿನಗಳಲ್ಲಿ ರಘುಪತಿ ಭಟ್ ಅವರು ಕಾನೂನಿನ ರೀತಿಯಲ್ಲಿ ನ್ಯಾಯಯುತವಾಗಿ ನಮಗೆ ನ್ಯಾಯ ದೊರಕಿಸಿಕೊಡಲಿ ಎಂದು ಪ್ರಾರ್ಥಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ದಿವಾಕರ ಐತಾಳ ಪ್ರಾರ್ಥನೆ ನೆರವೇರಿಸಿ ಪೂಜೆ ಸಲ್ಲಿಸಿದರು. ನೂರಾರು ಮಂದಿ ಸಂತೃಸ್ಥರು ಉಪಸ್ಥಿತರಿದ್ದರು.. ಈ ವೇಳೆ ಮಾತನಾಡಿದ ಮಾಜಿ ಶಾಸಕ ರಘುಪತಿ ಭಟ್ ನನಗೆ ಆಣೆ ಪ್ರಮಾಣ ಮಾಡಬೇಕೆಂಬ ಹೇಳಿಕೆ ನೀಡಿಲ್ಲ ಬ್ಯಾಂಕ್ ನವರ ನೋಟಿಸ್ ನೀಡಿದ್ದಕ್ಕೆ ಸಂತ್ರಸ್ತರು ಬಂದಿದ್ದಾರೆ. ಜಿಲ್ಲೆಯ ಅಷ್ಠಮಠದ ಸ್ವಾಮಿಜಿಗಳು ಆಣೆ ಪ್ರಮಾಣದ ಮಾಡಬೇಡಿ ಎಂದಿದ್ದರು, ಅದಕ್ಕೆ ಆಣೆ ಪ್ರಮಾಣ ಮಾಡಿಲ್ಲ ಕೇವರ ಪ್ರಾರ್ಥನೆ ಮಾಡಿದ್ದೇವೆ ಎಂದರು. ಬ್ಯಾಂಕ್ ಮತ್ತು ಸಂತ್ರಸ್ಥರ ನಡುವೆ ಜಿಲ್ಲೆಯ ಪ್ರಮುಖ ನಾಯಕರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಇತ್ಯರ್ಥ ಮಾಡಬೇಕೆಂದರು.
ಈ ವೇಳೆ ಮಾತನಾಡಿದ ಬ್ಯಾಂಕ್ ಅಧಿಕಾರಿಗಳು ಮಲ್ಪೆ ಶಾಖೆಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಬ್ಯಾಂಕ್ ನಂಬಿ ಸಾವಿರಾರು ಜನರು ಇದ್ದಾರೆ. ಇವರ ಹೇಳಿಕೆಗಳಿಂದ ಬ್ಯಾಂಕ್ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದು ಹೇಳಿದರು.
ಸದ್ಯ ಆಣೆ ಪ್ರಮಾಣದ ವಿಚಾರ ರದ್ದಾಗಿದ್ದು, ಜಿಲ್ಲೆಯ ಸಮುದಾಯದ ಮುಖಂಡರು ಹಾಗೂ ಧಾರ್ಮಿಕ ಮುಖಂಡರು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಕಾನೂನೂ ಹೋರಾಟಕ್ಕೂ ನಾವು ರೆಡಿ ಎಂದು ಶಾಸಕ ರಘುಪತಿ ಭಟ್ ಹೇಳಿದ್ದು ಈ ವಿವಾದ ಮುಂದೆ ಏನಾಗುತ್ತೋ ಕಾದು ನೋಡಬೇಕಾಗಿದೆ.