Connect with us

LATEST NEWS

ಮುಲ್ಕಿ – ಪ್ಲ್ಯಾಟ್ ನಲ್ಲಿ ಪತ್ನಿ ಮತ್ತು ಮಗುವಿನ ಶ*ವ..ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಕಾರ್ತಿಕ್ ಭಟ್

ಮುಲ್ಕಿ ನವೆಂಬರ್ 09: ರೈಲಿಗೆ ತಲೆಕೊಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ಳಾಯರು ರೈಲ್ವೇ ಹಳಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದ್ದು, ಇದೀಗ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಪ್ಲ್ಯಾಟ್ ನಲ್ಲಿ ಆತನ ಪತ್ನಿ ಮತ್ತು ಮಗುವಿನ ಶವ ಪತ್ತೆಯಾಗಿದೆ.


ಬೆಳ್ಳಾಯರು ರೈಲ್ವೇ ಹಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಯವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ, ಈ ವ್ಯಕ್ತಿಯನ್ನು ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್(32) ಎಂದು ಗುರುತಿಸಲಾಗಿದೆ. ಬಳಿಕ ವ್ಯಕ್ತಿಯ ಮಾಹಿತಿ ಕಲೆ ಹಾಕಿದ ಪೊಲೀಸರು ಕಾರ್ತಿಕ ವಾಸ ಮಾಡುತ್ತಿದ್ದ ಪ್ಲ್ಯಾಟ್ ಗೆ ತೆರಳಿದ್ದಾರೆ. ಆದರೆ ಪ್ಲ್ಯಾಟ್ ಬಾಗಿಲು ತೆಗೆದ ಪೊಲೀಸರಿಗೆ ಮಾತ್ರ ಶಾಕ್ ಆಗಿದೆ. ಯಾಕೆಂದರೆ ಅಲ್ಲಿ ಕಾರ್ತಿಕ್ ಪತ್ನಿ ಮತ್ತು 4 ವರ್ಷ ಪ್ರಾಯದ ಮಗುವಿನ ಶವ ಪತ್ತೆಯಾಗಿದೆ. ಮೂರು ದಿನಗಳಿಂದ ಬಾಗಿಲು ಮುಚ್ಚಿದ್ದು ಪತ್ನಿ ಮಗುವನ್ನು ಕೊಂದು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  ಪತ್ನಿ ಪ್ರಿಯಾಂಕ ((28) ಮಗು ಹೃದಯ್ (4) ಎಂದು ಗುರುತಿಸಲಾಗಿದೆ.

ಪಕ್ಷಿಕೆರೆ ಜಂಕ್ಷನ್ ನಲ್ಲಿ “ಹೋಟೆಲ್ ಕಾರ್ತಿಕ್” ನಡೆಸುತ್ತಿರುವ ಜನಾರ್ಧನ ಭಟ್ ಎಂಬವರ ಮೂವರು ಮಕ್ಕಳಲ್ಲಿ ಒಬ್ಬನಾದ ಕಾರ್ತಿಕ್ ಕದ್ರಿಯ ಸೊಸೈಟಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನ ತನ್ನ ಸ್ಕೂಟರ್ ಅನ್ನು ಕಲ್ಲಾಪು ದೇವಸ್ಥಾನ ಬಳಿ ನಿಲ್ಲಿಸಿ ರೈಲು ಹಳಿಯಲ್ಲಿ ಹೋಗಿದ್ದು ಬಳಿಕ ಛಿದ್ರಗೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮೂಲ್ಕಿ ಠಾಣಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *