FILM
ರೋಲ್ಸ್ ರಾಯ್ಸ್ ತೆರಿಗೆ ವಿನಾಯಿತಿ – ವಿಜಯ್ ನಂತರ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ನಟ ಧನುಷ್.. ದಿನಗೂಲಿ ನೌಕರ ಪ್ರತಿ ಲೀಟರ್ ಪೆಟ್ರೋಲ್ ಗೆ ತೆರಿಗೆ ಕಟ್ಟುತ್ತಾನೆ….!!
ಚೆನ್ನೈ ಅಗಸ್ಟ್ 06: ಇತ್ತೀಚೆಗೆ ತೆರಿಗೆ ಸಂಬಂಧ ಮದ್ರಾಸ್ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ನಟ ವಿಜಯ್ ಬಳಿಕ ಇದೀಗ ನಟ ಧನುಷ್ ಕೂಡ ತಮ್ಮ ರೋಲ್ಸ್ ರಾಯ್ ಕಾರಿಗೆ ತೆರಿಗೆ ವಿನಾಯಿತಿ ಕೇಳಲು ಹೋಗಿ ನ್ಯಾಯಾಧೀಶರಿಂದ ಛೀಮಾರಿ ಹಾಕಿಸಿಕೊಂಡಿದ್ದು, ಹಾಲು ಮಾರುವವನು ಪೆಟ್ರೋಲ್ ಹಾಕಿಸಿಕೊಳ್ಳುವಾಗ ದೇಶಕ್ಕೆ ತೆರಿಗೆ ಕಟ್ಟುತ್ತಾನೆ ನಿಮಗೆ ಯಾಕೆ ಆಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕೆಲವು ದಿನಗಳ ಹಿಂದೆ ನಟ ವಿಜಯ್ ರೋಲ್ಸ್ ರಾಯ್ಸ್ ಕಾರಿಗೆ ತೆರಿಗೆ ವಿನಾಯಿತಿ ಕೇಳಿ ಕೋರ್ಟ್ ನಿಂದ ಮುಖಭಂಗ ಅನುಭವಿಸಿದ್ದರು. ಈ ಹಿನ್ನಲೆ ನಟ ಧನುಷ್ ತೆರಿಗೆ ವಿನಾಯಿತಿ ಸಂಬಂಧ 2015ರಲ್ಲಿ ಸಲ್ಲಿಸಿದ್ದ ಹಳೆಯ ದೂರನ್ನು ವಾಪಾಸ್ ಪಡೆಯಲು ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಆದರೆ ಈ ಸಂದರ್ಭ ನಡೆದದ್ದೆ ಬೇರೆ ಉಳಿದ ತೆರಿಗೆಯನ್ನು ಪಾವತಿಸಲು ನಟ ಸಿದ್ಧ ಎಂದು ನಟನ ಪರ ವಕೀಲರು ಹೇಳಿದರು. ಗುರುವಾರ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯವು ಅನುಮತಿಸಲಿಲ್ಲ ಮತ್ತು ನಿಮ್ಮ ಉದ್ದೇ ಶಗಳು ನಿಜವಾದರೆ, 2018ರಲ್ಲಿ ಸುಪ್ರೀಂ ಕೋರ್ಟ್ ಸಮಸ್ಯೆಯನ್ನು ಇತ್ಯರ್ಥಪಡಿಸಿದ ನಂತರವೇ ನೀವು ತೆರಿಗೆಯನ್ನು ಪಾವತಿಸಬೇಕಾಗಿತ್ತು. ಈಗ ಹೈಕೋರ್ಟ್ ಈ ವಿಷಯವನ್ನು ಆದೇಶಗಳಿಗಾಗಿ ಪಟ್ಟಿ ಮಾಡಿದ ನಂತರ ನೀವು ಹಿಂತೆಗೆದುಕೊಳ್ಳಲು ಬಯಸುತ್ತಿದ್ದೀರಿ ಎಂದು ಕೋರ್ಟ್ ಟೀಕಿಸಿದೆ. ನ್ಯಾಯಾಲಯದ ಮೊರೆ ಹೋಗುವುದು ನಿಮ್ಮ ಹಕ್ಕು ಎಂಬುದರಲ್ಲಿ ಸಂದೇಹವಿಲ್ಲ. ಆದರೆ, 2018 ರಲ್ಲಿ ಸುಪ್ರೀಂ ಕೋರ್ಟ್ ಸಮಸ್ಯೆಯನ್ನು ಇತ್ಯರ್ಥಪಡಿಸಿದ ನಂತರವಾದರೂ ನೀವು ತೆರಿಗೆ ಪಾವತಿಸಿ ಮತ್ತು ಅರ್ಜಿಯನ್ನು ಹಿಂಪಡೆಯಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ,
ಅಲ್ಲದೆ ಮುಂದಿನ 48 ಗಂಟೆಯೊಳಗೆ 30.30 ಲಕ್ಷ ರೂ. ಪಾವತಿಸುವಂತೆ ನ್ಯಾಯಮೂರ್ತಿ ಎಸ್. ಎಂ. ಸುಬ್ರಮಣ್ಯಂ ಅವರು ಧನುಶ್ ಗೆ ಆದೇಶಿಸಿದ್ದಾರೆ. ಧನುಶ್ ರಂತಹ ಸೆಲೆಬ್ರಿಟಿಗಳಿಗಿಂತ ಕಡಿಮೆ ಸಂಪಾದನೆ ಮಾಡುವವರೇ ತೆರಿಗೆ ವಿನಾಯಿತಿ ಬೇಕು ಎಂದು ಒಂದು ದಿನವೂ ನ್ಯಾಯಾಲಯದ ಮೆಟ್ಟಿಲು ಹತ್ತುವುದಿಲ್ಲ ಎಂದು ನ್ಯಾಯಮೂರ್ತಿ ಟೀಕಿಸಿದರು. ತೆರಿಗೆದಾರರ ಹಣದಿಂದ ನಿರ್ಮಿಸಲಾದ ರಸ್ತೆಗಳಲ್ಲಿ ನೀವು ಐಷಾರಾಮಿ ಕಾರಗಳನ್ನು ಓಡಿಸುತ್ತೀರಿ. ಹಾಲು ವ್ಯಾಪಾರಿ ಅಥವಾ ದಿನಗೂಲಿ ನೌಕರರು ಸಹ ತಾವು ತೆಗೆದುಕೊಳ್ಳುವ ಪ್ರತಿ ಲೀಟರ್ ಪೆಟ್ರೋ ಲ್ಗೂ ತೆರಿಗೆ ಕಟ್ಟುತ್ತಾರೆ ಎಂದು ಧನುಷ್ ಅವರನ್ನು ನ್ಯಾಯಮೂರ್ತಿಗಳು ಛೇಡಿಸಿದರು.