KARNATAKA
madikeri : ಎತ್ತಿನ ಗಾಡಿ ಅಡಿ ಬಿದ್ದು ಬಾಲಕ ಮೃತ್ಯು..!
ಮಡಿಕೇರಿ: ಎತ್ತಿನ ಗಾಡಿ ಬಿದ್ದು ಪುಟ್ಟ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಕೊಡಗಿನ ಕುಶಾಲನಗರ ಸಮೀಪ ತೊರೆನೂರು ಗ್ರಾಮದಲ್ಲಿ ನಡೆದಿದೆ.
ತೊರೆನೂರು ಗ್ರಾಮದ ಟಿ.ಆರ್.ಮಧು ಹಾಗೂ ಅನು ದಂಪತಿಯ ಪುತ್ರ ಟಿ.ಎಂ.ತರುಣ್ (7) ಮೃತ ಬಾಲಕ. ರವಿವಾರ ಬೆಳಿಗ್ಗೆ ಬಾಲಕನ ಮನೆಯ ಬಳಿ ಶುಂಠಿ ತುಂಬಿದ್ದ ಎತ್ತಿನ ಗಾಡಿ ಭಾರ ಹೆಚ್ಚಾಗಿ ಮಗುಚಿಕೊಂಡಿತು. ಈ ಸಂದರ್ಭ ಪಕ್ಕದಲ್ಲೇ ಇದ್ದ ತರುಣ್ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ ಎನ್ನಲಾಗಿದೆ. ತಕ್ಷಣ ಬಾಲಕನನ್ನು ಕುಶಾಲನಗರ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ತರುಣ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.