KARNATAKA
ಚಕ್ರವರ್ತಿ ಸೂಲಿಬೆಲೆ ವಿರುದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗರಂ..ಅವ್ನಗೇನ್ ಮಾನ ಮಾರ್ಯಾದೆ ಇದೆಯಾ

ಮೈಸೂರು ಫೆಬ್ರವರಿ 06: ಶುಕ್ರವಾರ ನಡೆಯುವ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಮುಸ್ಲಿಂ ವಿಧ್ಯಾರ್ಥಿಗಳಿಗಾಗಿ ಬದಲಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ವಿರುದ್ದ ಶಿಕ್ಷಣ ಸಚಿವ ಮಧುಬಂಗಾರಪ್ಪ ಗರಂ ಆಗಿದ್ದಾರೆ. ರಾಜ್ಯ ಸರ್ಕಾರ ಮುಸ್ಲಿಮರ ಓಲೈಕೆ ಮಾಡುವ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂನ ಮಾಜ್‌ಗಾಗಿ ಪರೀಕ್ಷೆಯ ಸಮಯವೇ ಬದಲು ಮಾಡಿದೆ ಎಂದು ಸುಳ್ಳು ಸುದ್ದಿ ಹಬ್ಬಿದ್ದ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ದೂರುಗಳು ಬಂದಿವೆ. ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, “ಅವನ್ಯಾರು ಚಕ್ರವರ್ತಿ ಸೂಲಿಬೆಲೆನಾ ತಲೆಹರಟೆ, ಅವ್ನಗೇನ್ ಮಾನ ಮಾರ್ಯಾದೆ ಇದೆಯಾ..?. ಪುಸ್ತಕದಲ್ಲಿ ಮಕ್ಕಳನ್ನು ದಿಕ್ಕು ತಪ್ಪಿಸುವ ಕೆಲಸ ಬರೆದಿದ್ದರು, ನಾನು ಬಂದಾಗ ಅದಕ್ಕೆ ಹೇಳಿದ್ದು ಅದನ್ನು ಕಿತ್ತು ಬಿಸಾಡುತ್ತೇನೆ ಅಂತ. ಅದು ಕೂಡ ದೊಡ್ಡ ಚರ್ಚೆ ಮಾಡಿದ್ದರು. ಇಂಥದ್ದನ್ನು ಕಿತ್ತು ಬಿಸಾಕದೆ ಇನ್ನೇನು ಮಾಡೋದು? ಹೊಲಸನ್ನು ಮನೆಯಲ್ಲಿ ಇಟ್ಟುಕೊಳ್ತೀರಾ?”ಎಂದು ಸಚಿವರು ಪ್ರಶ್ನಿಸಿದ್ದಾರೆ.

ಅವ ಮತ್ತೆ ಮೊನ್ನೆ ಟ್ವೀಟ್ ಮಾಡಿದ್ದಾನೆ. ಮಾನ ಮರ್ಯಾದೆ ಇಲ್ಲ… ಹತ್ತನೆ ಕ್ಲಾಸ್ ಪರೀಕ್ಷೆ ದಿನ ಒಂಬತ್ತು ಗಂಟೆಗೆ ಮಾಡ್ತಿರಾ ಮಾರ್ಚ್ 1 ಕ್ಕೆ ಶುಕ್ರವಾರ ಯಾಕೆ ಎರಡು ಗಂಟೆಗೆ… ವೈ …? ನಮಾಜ್‌ಗಾ? ಅಂತ ಟ್ವಿಟ್ ಮಾಡಿದ್ದಾರೆ. ವಿಷ ಬೀಜ ಬಿತ್ತೋದು ಇಂತಹವರೆ ಅಲ್ವಾ? ದೂರುಗಳು ಬಂದಿವೆ. ಕಂಪ್ಲೈಂಟ್ಸ್ ಹೋಗುತ್ತಿವೆ ಅವರ ಮೇಲೆ” ಎಂದಿದ್ದಾರೆ ಪರೀಕ್ಷೆ ಮಧ್ಯಾಹ್ನ ನಡೆಸಲು ಅಸಲಿ ಕಾರಣ ಬೇರೆನೇ “ಮಾರ್ಚ್ 1 ರಿಂದ ಸೆಕೆಂಡ್ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದೆ. ಅದೇ ಶಾಲೆಯಲ್ಲಿ ಬೆಳಗ್ಗೆ ದ್ವಿತೀಯ ಪಿಯುಸಿ ಪರೀಕ್ಷೆ ಇದೆ. ಮಧ್ಯಾಹ್ನಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿದೆ. ಪರೀಕ್ಷೆಯನ್ನು ಪುಶ್ ಮಾಡಿರೋದಷ್ಟೆ. ಇವರಿಗೆ ಒಂದು ಕಾಮನ್ ಸೆನ್ಸ್ ಇಲ್ವಲ್ಲ? ಇವರು ಒಂದು ಪಠ್ಯ ಪುಸ್ತಕ ಪರೀಷ್ಕರಣಗೆ ಅಧ್ಯಕ್ಷನೋ ಸುಡುಗಾಡೋ ಆಗಿದ್ದರು. ಮಾನ ಮರ್ಯಾದೆ ಇದೆಯಾ ಇವರಿಗೆ.. ಒಂದು ಕಡೆ ಕೆಲಸ ಮಾಡಿ ಎಲೆಕ್ಷನ್ ಬಂದ ತಕ್ಷಣ ತಲೆ ಎತ್ತುತ್ತವೆ. ಇದೆಲ್ಲಾ ಬಿಟ್ಟು ಬಿಡಿ ಬಿಜೆಪಿ. ಇವು ಯಾವುದು ನಡೆಯುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.