Connect with us

FILM

ಇಡೀ ವಿಮಾನದಲ್ಲಿ ನಾನು ಏಕಾಂಗಿ ಪ್ರಯಾಣಿಕ – ನಟ ಆರ್ ಮಾಧವನ್

ಬೆಂಗಳೂರು: ಕೊರೊನಾ ಇಡೀ ವಿಶ್ವವನ್ನು ಯಾವ ರೀತಿ ಮಾಡಿದೆ ಎನ್ನುವುದಕ್ಕೆ ಇದು ನಟ ಮಾಧವನ್ ಹಂಚಿಕೊಂಡಿರುವ ವಿಡಿಯೋ ಒಂದು ಒಳ್ಳೆ ಉದಾಹರಣೆ. ಈಗಾಗಲೇ ದೇಶದಲ್ಲಿ ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ವಿವಿಧ ನಿಯಮಗಳು ಜಾರಿಯಲ್ಲಿದೆ. ಈ ನಡುವೆ ನಟ ಆರ್ ಮಾಧವನ್ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ಅಮೆರಿಕಿ ಪಂಡಿತ್ ಚಿತ್ರದ ಚಿತ್ರೀಕರಣಕ್ಕಾಗಿ ದುಬೈಗೆ ಪ್ರಯಾಣ ಬೆಳೆಸಿದ್ದು, ತಮ್ಮ ಪ್ರಯಾಣದ ಸಂದರ್ಭ ನಡೆದ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


51 ವರ್ಷದ ನಟ ವಿಮಾನದಲ್ಲಿ ಏಕಾಂಗಿಯಾಗಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಮತ್ತು ವಿಮಾನದಲ್ಲಿ ಒಬ್ಬನೇ ಪ್ರಯಾಣಿಸಿದೆ ಎಂದು ತಿಳಿಸಿದ್ದಾರೆ. ದುಬೈಗೆ ಪ್ರಯಾಣಿಸಬೇಕಾದರೆ ಕೋವಿಡ್ ನೆಗೆಟಿವ್ ವರದಿ ಮತ್ತು ಲಸಿಕೆ ಪ್ರಮಾಣಪತ್ರ ಕಡ್ಡಾಯವಾಗಿದೆ. ಇವು ಇಲ್ಲದಿದ್ದರೆ, ಪ್ರಯಾಣಕ್ಕೆ ಅನುಮತಿ ಇರುವುದಿಲ್ಲ. ಮಾಧವನ್ ಪ್ರಯಾಣಿಸಿದ ಸಂದರ್ಭದಲ್ಲಿ ಅವರೊಬ್ಬರೇ ಇದ್ದಿದ್ದು, ಖಾಲಿ ವಿಮಾನ ಮತ್ತು ಏರ್‌ಪೋರ್ಟ್ ಕಂಡು ಅಚ್ಚರಿ ಜತೆಗೆ ಬೇಸರವಾಯಿತು ಎಂದು ಬರೆದುಕೊಂಡಿದ್ದಾರೆ.


ಆರ್ ಮಾಧವನ್ ಮೊದಲ ವೀಡಿಯೊದಲ್ಲಿ ವಿಮಾನದ ಖಾಲಿ ಆಸನಗಳ ಕಡೆಗೆ ತೋರಿಸುವುದನ್ನು ಕಾಣಬಹುದು. ನಂತರ ವಿಡಿಯೋದಲ್ಲಿ ನಿರ್ಜನವಾದ ದುಬೈ ವಿಮಾನ ನಿಲ್ದಾಣದ ಒಂದು ನೋಟವನ್ನು ನೀಡಿದರು ಮತ್ತು ವಿಮಾನ ನಿಲ್ದಾಣದಲ್ಲಿರುವ ಏಕೈಕ ಪ್ರಯಾಣಿಕ ಆರ್ ಮಾಧವನ್. ಇನ್ನೊಂದು ವಿಡಿಯೋದಲ್ಲಿ, ಆರ್ ಮಾಧವನ್ ವಿಮಾನ ನಿಲ್ದಾಣದ ನಿರ್ಜನ ಕೋಣೆಯ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ನಿಲ್ದಾಣಗಳು ಖಾಲಿ ಹೊಡೆಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಪರಿಸ್ಥಿತಿ ಬೇಗನೇ ಸುಧಾರಿಸಲಿ, ಎಲ್ಲ ಮೊದಲಿನಂತಾಗಲಿ ಎಂದು ಮಾಧವನ್ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *