LATEST NEWS
ಮಡಗಾಂವ್-ಮಂಗಳೂರು ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆ
ಉಡುಪಿ ಅಕ್ಟೋಬರ್ 14: ರೈಲ್ವೆ ಹೋರಾಟಕ್ಕೆ ಜಯ ಸಂದಿದ್ದು, ಮಡಗಾಂವ್-ಮಂಗಳೂರು ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆಗೊಳಿಸಿ ಭಾರತೀಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ಬೈಂದೂರು ರೈಲು ಯಾತ್ರಿ ಸಂಘ ಅಧ್ಯಕ್ಷ, ಭಾರತೀಯ ರೈಲ್ವೆ ಬೋರ್ಡ್ ಸಲಹಾ ಸಮಿತಿಯ ಮಾಜಿ ಸದಸ್ಯ ವೆಂಕಟೇಶ್ ಕಿಣಿಯವರು ಮಡಗಾಂವ್-ಮಂಗಳೂರು ಎಕ್ಸ್‌ಪ್ರೆಸ್ ರೈಲು ಸಮಯ ಬದಲಾವಣೆ ಒತ್ತಾಯಿಸಿ ಭಾರತೀಯ ರೈಲ್ವೆ ಬೋರ್ಡ್‌ಗೆ ಮನವಿ ಸಲ್ಲಿಸಿದರು.
ಪ್ರಸ್ತುತ ಮಡಗಾಂವ್‌ನಿಂದ ಬೆಳಗ್ಗೆ 5 ಗಂಟೆಗೆ ಹೊರಟು 12.15 ಗಂಟೆಗೆ ಮಂಗಳೂರು ತಲುಪುತ್ತಿತ್ತು. ಇದರಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಮಂಗಳೂರು, ಉಡುಪಿಗೆ ಹೋಗುವವರಿಗೆ ಅನಾನುಕೂಲತೆಯಾಗುತ್ತಿದೆ ಎಂದು ಅವರು ಮನವಿಯಲ್ಲಿ ಕಾಣಿಸಿದ್ದರು. ಮನವಿಯನ್ನು ಕೊಂಕಣ ರೈಲ್ವೆ ಅವರು ಪಾಲ್ಗಾಟ್ ಗೆ ವಿಭಾಗದ ಪರಿಶೀಲನೆಗೆ ಕಳುಹಿಸಿದ್ದರು. ಪಾಲ್ಗಾಟ್ ವಿಭಾಗ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಿಲ್ಲ. ನಂತರ ಉಡುಪಿಯ ಸಮಾಜ ಸೇವಕ ಹನುಮಂತ ಕಾಮತ್ ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಡ ಹೇರಿದ್ದರು. ನಂತರ ನಡೆದ ಸಭೆಯಲ್ಲಿ ಪ್ರಸ್ತಾವನೆಗೆ ದಕ್ಷಿಣ ರೈಲ್ವೆ ಒಪ್ಪಿಗೆ ಸೂಚಿಸಿದ್ದರು ಅನುಮತಿ ಸಿಕ್ಕಿರಲಿಲ್ಲ. ನಂತರ ರೈಲ್ವೆ ಬೋರ್ಡ್ ಅಧಿಕಾರಿಗಳ ಜತೆ ನಡೆಸಿದ ನಿರಂತರ ಸಂಪರ್ಕದಿಂದ ಭಾರತೀಯ ರೈಲ್ವೆ ಬೋರ್ಡ್ ಇದೀಗ ಸಮಯ ಬದಲಾವಣೆಗೊಳಿಸಿ ಆದೇಶ ಹೊರಡಿಸಿದೆ.
ಬೆಳಗ್ಗೆ 4 ಗಂಟೆಗೆ ಮಡಗಾಂವ್ ಬಿಟ್ಟು ಬೆಳಗ್ಗೆ 7.30ಗಂಟೆಗೆ ಬೈಂದೂರು, 10.15 ಗಂಟೆಗೆ ಸುರತ್ಕಲ್ ತಲುಪಲಿದೆ. ಸಮಯ ಬದಲಾವಣೆಯಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಭಾರಿ ಅನುಕೂಲ ಆಗಿದೆ ಎಂದು ಹನುಮಂತ ನಾಯಕ್ ತಿಳಿಸಿದ್ದಾರೆ.