LATEST NEWS
ಪೆಟ್ರೋಲ್ ನಂತರ ಈಗ ಎಲ್ ಪಿಜಿ ಸರದಿ – ಸಿಲಿಂಡರ್‌ಗೆ ₹50 ಏರಿಕೆ!
ಹೊಸದಿಲ್ಲಿ: ದೇಶದಲ್ಲಿ ಪೆಟ್ರೋಲ್ ಡಿಸೇಲ್ ಜನರ ಜೇಬು ಸುಡುತ್ತಿರುವ ನಡುವೆ ಇದೀಗ ಎಲ್ ಪಿಜಿ ಗ್ರಾಹಕರಿಗೂ ಬೆಲೆ ಏರಿಕೆಯ ಬಿಸಿ ತಟ್ಟಲಾರಂಭಿಸಿದೆ. ಕೆಲ ದಿನಗಳ ಹಿಂದಷ್ಟೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿತ್ತು. ಇದೀಗ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲೂ ಹೆಚ್ಚಳ ಮಾಡಿರುವ ತೈಲ ಕಂಪನಿಗಳು ಗ್ರಾಹಕರಿಕೆ ಮತ್ತೆ ಶಾಕ್ ನೀಡಿವೆ.
ಗೃಹಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಬರೋಬ್ಬರಿ 50 ರೂಪಾಯಿ ಹೆಚ್ಚಿಸಲಾಗಿದೆ. 5 ಕೆಜಿ ಗೃಹಳಕೆಯ ಸಿಲಿಂಡರ್ ಬೆಲೆಯಲ್ಲೂ 18 ರೂಪಾಯಿ ಏರಿಸಲಾಗಿದೆ. ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲೂ ಏರಿಕೆಯಾಗಿದ್ದು, 19 ಕೆಜಿ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಬರೋಬ್ಬರಿ 36.50 ರೂಪಾಯಿ ಹೆಚ್ಚಿಸಲಾಗಿದೆ. ಗೃಹಬಳಕೆ (14.2 ಕೆಜಿ) ಸಿಲಿಂಡರ್ ದಿಲ್ಲಿಯಲ್ಲಿ 644ರೂ, ಕೋಲ್ಕತ – 670.50 ರೂ. ಮುಂಬಯಿ: 644 ರೂ., ಚೆನ್ನೈ: 660ರೂ. ಆಗಿದೆ.
ಈಗಾಗಲೇ ಕೇಂದ್ರ ಸರಕಾರ ಎಲ್‌ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಪೂರ್ಣವಾಗಿ ಸ್ಥಗಿತಗೊಳಿಸಿದ್ದು. ಸಬ್ಸಿಡಿ ಮತ್ತು ಸಬ್ಸಿಡಿಯೇತರ ಎಲ್ಲ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲೂ ಏಕರೂಪತೆ ತಂದಿದೆ.ದೇಶದಲ್ಲಿ ಸುಮಾರು 45 ಕೋಟಿ ಎಲ್‌ಪಿಜಿ ಗ್ರಾಹಕರಿದ್ದಾರೆ.
Facebook Comments
You may like
-
ಮುಂದುವರೆದೆ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ…ರಾಜ್ಯದಲ್ಲಿ 90 ಸನಿಹಕ್ಕೆ ಪೆಟ್ರೋಲ್ ಬೆಲೆ
-
ಅಚ್ಚೇ ದಿನ್ – ಒಂದು ಲೀಟರ್ ಪೆಟ್ರೋಲ್ ಗೆ ಈಗ 87 ರೂಪಾಯಿ
-
ಪೆಟ್ರೋಲ್ ದರ ಏರಿಕೆ ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ
-
ಕಳೆದ 15 ದಿನದಲ್ಲಿ 12 ಬಾರಿ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ
-
ದೇಶದ ಕೆಲವು ನಗರಗಳಲ್ಲಿ 90 ರ ಗಡಿ ದಾಟಿದ ಪೆಟ್ರೋಲ್ ಬೆಲೆ
-
ಗಗನಮುಖಿಯಾದ ಪೆಟ್ರೋಲ್ ಡೀಸೆಲ್ ಬೆಲೆ..ದಿನದಿಂದ ದಿನಕ್ಕೆ ಪೈಸೆ ಲೆಕ್ಕದಲ್ಲಿ ಏರಿಕೆ
You must be logged in to post a comment Login