LATEST NEWS
ದುಬಾರಿ ದುನಿಯಾ – ಇಂದಿನಿಂದಲೇ ಜಾರಿಗೆ ಬರುವಂತೆ ಎಲ್ ಪಿಜಿ ಬೆಲೆ 25.50 ರೂಪಾಯಿ ಏರಿಕೆ

ನವದೆಹಲಿ: ಒಂದೆಡೆ ಶತಕ ಬಾರಿಸಿರುವ ಪೆಟ್ರೋಲ್ ಬೆಲೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಅದರ ನಡುವೆ ಜನ ಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದ್ದು, ಇಂದಿನಿಂದಲೇ ಜಾರಿಗೆ ಬರುವಂತೆ ತೈಲ ಕಂಪನಿಗಳು ಗೃಹ ಬಳಕೆಯ ಅಡುಗೆ ಅನಿಲದ ಪ್ರತೀ ಸಿಲಿಂಡರ್ ಬೆಲೆಯಲ್ಲಿ ₹ 25.50 ಹೆಚ್ಚಳ ಮಾಡಿವೆ.
ಈ ಮೂಲಕ 14.2 ಕೆಜಿ ತೂಕದ ಸಿಲಿಂಡರ್ ಬೆಲೆ ದೆಹಲಿಯಲ್ಲಿ ₹ 834.50 ಆಗಿದೆ. ಇತ್ತ, 19 ಕೆಜಿ ಸಿಲಿಂಡರ್ ಬೆಲೆಯಲ್ಲೂ ಸಹ ₹ 76 ಹೆಚ್ಚಿಸಲಾಗಿದ್ದು, ₹ 1,550 ಆಗಿದೆ. ಮುಂಬೈ ಮತ್ತು ಕೋಲ್ಕತ್ತಾದಲ್ಲೂ ಸಿಲಿಂಡರ್ ಬೆಲೆ ₹ 834.50 ಆಗಿದೆ,
ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಿಸಲಾಗುತ್ತದೆ ಮತ್ತು ಜುಲೈ 1ರ ಈ ಹೊಸ ಪರಿಷ್ಕರಣೆ ಸೇರಿ ಆರು ತಿಂಗಳಲ್ಲಿ ಪ್ರತಿ ಸಿಲಿಂಡರ್ ಬೆಲೆಯಲ್ಲಿ ₹ 140 ರಷ್ಟು ಹೆಚ್ಚಾಗಿದೆ. ಜೂನ್‌ನಲ್ಲಿ ಬೆಲೆಯಲ್ಲಿ ಬದಲಾವಣೆ ಆಗಿರಲಿಲ್ಲ.
