KARNATAKA
ರಾಮನಗರ – ಪ್ರೀತಿಗೆ ಮನೆಯವರ ವಿರೋಧ SSLC ವಿಧ್ಯಾರ್ಥಿನಿ ಪ್ರಿಯಕರ ಜೊತೆ ನೇಣಿಗೆ ಶರಣು

ರಾಮನಗರ : ಎಸ್ಎಸ್ಎಲ್ ಸಿ ಓದುತ್ತಿರುವ ಬಾಲಕಿ ಪ್ರೇಮದ ಬಲಗೆ ಬಿದ್ದು ಇದೀಗ ಪ್ರಾಣ ಕಳೆದುಕೊಂಡಿದ್ದಾಳೆ. ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ ಪ್ರೇಮಿಗಳು ಮರವೊಂದಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದಲ್ಲಿ ನಡೆದಿದೆ.
ಮೃತರನ್ನು ಚಾಮುಂಡೇಶ್ವರಿ ನಗರದ ನಿವಾಸಿ ಹರೀಶ್ (26) ಹಾಗೂ ಗುಡ್ಡದಹಳ್ಳಿ ಗ್ರಾಮದ ಕಾವ್ಯಾ (16) ಮೃತರು. ಕಾವ್ಯಾ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹರೀಶ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇಬ್ಬರ ಪ್ರೀತಿಗೆ ಮನೆಯಲ್ಲಿ ವಿರೋಧ ಇದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ರಾಮನಗರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
