LATEST NEWS
ಪಾಗಲ್ ಪ್ರೇಮಿಯಿಂದ 12 ಬಾರಿ ಚೂರಿ ಇರಿತಕ್ಕೊಳಗಾಗಿದ್ದ ದೀಕ್ಷಾ ಸ್ಥಿತಿ ಗಂಭೀರ

ಪಾಗಲ್ ಪ್ರೇಮಿಯಿಂದ 12 ಬಾರಿ ಚೂರಿ ಇರಿತಕ್ಕೊಳಗಾಗಿದ್ದ ದೀಕ್ಷಾ ಸ್ಥಿತಿ ಗಂಭೀರ
ಮಂಗಳೂರು ಜೂನ್ 29: ನಿನ್ನೆ ಪಾಗಲ್ ಪ್ರೇಮಿಯಿಂದ 12 ಬಾರಿ ಚೂರಿ ಇರಿತಕ್ಕೊಳಗಾಗಿದ್ದ ದೀಕ್ಷಾ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ದೀಕ್ಷಾಳನ್ನು ತೀವ್ರ ನೀಗಾ ಘಟಕದಲ್ಲಿ ಇರಿಸಲಾಗಿದ್ದು ಈಗಾಗಲೇ 14 ಬಾಟಲ್ ರಕ್ತ ನೀಡಲಾಗಿದೆ.
ನಿನ್ನೆ ಮಂಗಳೂರು ಹೊರವಲಯದ ಉಳ್ಳಾಲ ದೇರಳ ಕಟ್ಟೆಯ ಬಗಂಬಿಲ ಆರೋಪಿ ಸುಶಾಂತ್ ದೀಕ್ಷಾಳಿಗೆ ಚೂರಿ ಇರಿದು ತಾನು ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ, ನಂತರ ಇಬ್ಬರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೀಕ್ಷಾಗಳ ಆರೋಗ್ಯ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಸುಶಾಂತ್ ಚೇತರಿಸಿಕೊಂಡಿದ್ದು ಆತನನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ವಾರ್ಡ್ ಗೆ ಶಿಫ್ಟ ಮಾಡಿದ ನಂತರ ಆರೋಪಿ ದೀಕ್ಷಾಳ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾನೆ.

ಆರೋಪಿ ಸುಶಾಂತ್, ದೀಕ್ಷಾಳನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಆದ್ರೆ ದೀಕ್ಷಾ ಈ ಪ್ರೀತಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಕಳೆದ ಕೆಲವು ದಿನಗಳಿಂದ ಆತನನ್ನು ದೂರವಿಟ್ಟಿದ್ದಳು. ಆದ್ರೆ ದೀಕ್ಷಾಳನ್ನು ತುಂಬಾ ಪ್ರೇಮಿಸುತ್ತಿದ್ದ ಪಾಗಲ್ ಪ್ರೇಮಿ ಸುಶಾಂತ್ ಇತ್ತೀಚೆಗೆ 50 ಸಾವಿರ ರೂಪಾಯಿ ಖರ್ಚು ಮಾಡಿ ಯುವತಿಯ ಹುಟ್ಟುಹಬ್ಬ ಆಚರಿಸಿದ್ದ ಎಂದು ಹೇಳಲಾಗಿದೆ.
ಆತ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂಬ ಹಿನ್ನಲೆಯಲ್ಲಿ ಹುಟ್ಟುಹಬ್ಬದ ಮರುದಿನವೇ ದೀಕ್ಷಾ ಪೊಲೀಸ್ ರಿಗೆ ದೂರು ನೀಡಿದ್ದಳು ಎಂದು ತಿಳಿದು ಬಂದಿದ್ದೆ. ಇದರಿಂದ ಸಿಟ್ಟಾಗಿದ್ದ ಸುಶಾಂತ್ ದೀಕ್ಷಾಳನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದ ಎಂದು ತಿಳಿದು ಬಂದಿದೆ. ನಿನ್ನೆ ಮಧ್ಯಾಹ್ನದ ವರೆಗೂ ಕೆಲಸ ಮಾಡಿಕೊಂಡಿದ್ದ ಸುಶಾಂತ ನಂತರ ಗಾಂಜಾ ಸೇವಿಸಿ ಈ ಕೃತ್ಯ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ.
VIDEO
https://youtu.be/wCmnYBFN-3k