KARNATAKA
ಬರ್ತ್ ಡೇ ಕೇಕ್ ಜೊತೆ ಪ್ರೇಯಸಿಯ ಕುತ್ತಿಗೆ ಕತ್ತರಿಸಿದ ಪಾಗಲ್ ಪ್ರೇಮಿ

ಬೆಂಗಳೂರು ಎಪ್ರಿಲ್ 15: ಪ್ರೇಯಸಿಯ ಬರ್ತ್ ಡೇ ಸೆಲಬ್ರೇಷನ್ ಮಾಡಿದಲ್ಲದೇ ಕೇಕ್ ಕಟ್ ಮಾಡಿದ ಬಳಿಕ ಚಾಕುವಿನಿಂದ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.
ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯ (24) ಕೊಲೆಯಾದ ಯುವತಿ. ಸದ್ಯ ಹತ್ಯೆ ಮಾಡಿದ ಆರೋಪಿ ಪ್ರಶಾಂತ್ ಪೊಲೀಸರ ವಶದಲ್ಲಿದ್ದಾನೆ. ಇವರಿಬ್ಬರು ಕನಕಪುರ ಮೂಲದ ದೂರ ಸಂಬಂಧಿಕರು. ಕಳೆದ 6 ವರ್ಷದಿಂದ ಇಬ್ಬರು ಪ್ರೀತಿಸುತ್ತಿದ್ದರು. ಕಳೆದ ಮಂಗಳವಾರ ಯುವತಿಯ ಹುಟ್ಟುಹಬ್ಬ ಇತ್ತು. ಆಚರಣೆಗೆ ಅಂದು ಬಾರದೆ ಬ್ಯುಸಿ ಇರುವುದಾಗಿ ಹೇಳಿದ್ದ. ಹೀಗಾಗಿ ನಿನ್ನೆ ಬರ್ತ್ ಡೇ ಸೆಲೆಬ್ರೇಷನ್ ಪ್ಲಾನ್ ಮಾಡಿದ್ದನು. ಅದರಂತೆ ರಾತ್ರಿ ಕೇಕ್ ತರಿಸಿ ಯುವತಿಯಿಂದ ಕಟ್ ಮಾಡಿಸಿದ್ದನು. ಬಳಿಕ ಕೇಕ್ ತಿನ್ನಿಸಿದ್ದ ಆರೋಪಿ ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
