KARNATAKA
3 ವರ್ಷದಿಂದ ಲವ್-ಸೆಕ್ಸ್-ಅಬಾರ್ಷನ್; ಲೆಕ್ಚರರ್ ಮಗನ ಕಾಮಪುರಾಣ!
ಬೆಂಗಳೂರು, ಫೆಬ್ರವರಿ 04 : ವಿವಾಹವಾಗುವುದಾಗಿ ನಂಬಿಸಿ ಉಪನ್ಯಾಸಕಿ ಮಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ತಾನು ಓದುತ್ತಿದ್ದ ಕಾಲೇಜಿನ ಲೆಕ್ಚರರ್ರೊಬ್ಬರ ಮಗನ ಪ್ರೇಮಪಾಶಕ್ಕೆ ಸಿಕ್ಕ ವಿದ್ಯಾರ್ಥಿನಿ, ಇದೀಗ ನ್ಯಾಯಕ್ಕಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಸಂತ್ರಸ್ತ ಯುವತಿ ಕೊಟ್ಟ ದೂರಿನ ಮೇರೆಗೆ ಆರೋಪಿ ಚಂದನ್ನನ್ನು ಪೊಲೀಸರು ಬಂಧಿಸಿದ್ದಾರೆ. ಚಂದನ್ ತಾಯಿ ನಗರದ ಕಾಲೇಜೊಂದರ ಲೆಕ್ಚರರ್. ಆ ಯುವತಿಯೂ ಅದೇ ಕಾಲೇಜಿನ ವಿದ್ಯಾರ್ಥಿನಿ. ಲೆಕ್ಚರರ್ನನ್ನು ನೋಡೋಕೆ ಎಂದು ವಿದ್ಯಾರ್ಥಿನಿ ಮನೆಗೆ ಬಂದ ವೇಳೆ ಚಂದನ್ ಪರಿಚಯವಾಗಿತ್ತು. ಇವರಿಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿಗೆ ತಿರುಗಿತ್ತು. ಮುಂದೆ ಏನೆಲ್ಲ ಅವಾಂತರ ಆಯ್ತು ಎಂಬುದುನ್ನು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.
2018ರಲ್ಲಿ ಸಂತ್ರಸ್ತ ಯುವತಿ ಕಾಲೇಜುನಲ್ಲಿ ಓದುತ್ತಿರುವಾಗ ಆರೋಪಿ ಚಂದನ್ನ ಪರಿಚಯವಾಗಿತ್ತು. ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಈ ನಡುವೆ ಮದುವೆಯಾಗುವುದಾಗಿ ನಂಬಿಸಿದ್ದ ಚಂದನ್, ಯುವತಿ ಜತೆ ಮೂವರು ವರ್ಷಗಳಿಂದ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದಿದ್ದ.
ಎರಡು ಬಾರಿ ಗರ್ಭಿಣಿಯಾದರೂ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದ. ಅಲ್ಲದೆ ಮದುವೆಗಾಗಿ 5-6ರಿಂದ ಲಕ್ಷ ಹಣವನ್ನೂ ಪಡೆದಿದ್ದ. ಇದೀಗ ಮದುವೆ ಆಗಲ್ಲ ಎಂದು ವಂಚಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಚಂದನ್ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.