Connect with us

LATEST NEWS

ಉಡುಪಿ – ಯುವಕನ ಸಾವಿನ ಬಳಿಕ ಪತ್ನಿ ಮಗುವನ್ನು ತಿರಸ್ಕರಿಸಿದ ಕುಟುಂಬ

ಉಡುಪಿ ಅಗಸ್ಟ್ 26: ಪ್ರೀತಿಸಿ ಮದುವೆಯಾದರು ಎಂಬ ಕಾರಣಕ್ಕೆ ಹೃದಯಾಘಾತದಿಂದ ಸಾವನಪ್ಪಿದ ಯುವಕನ ಮೃತದೇಹ ಪಡೆಯಲು ಬಂದ ಸಂಬಂಧಿಕರು, ಈತನ ಬಾಣಂತಿ ಪತ್ನಿ ಹಾಗೂ 20 ದಿನದ ಮಗುವನ್ನು ತಿರಸ್ಕರಿಸಿ ತೆರಳಿದ ಅಮಾನವೀಯ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.


ಉಡುಪಿಯಲ್ಲಿ ಮೆಕಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಯ್ಯಪ್ಪ ಎನ್ನುವವರು ಎರಡು ವರ್ಷಗಳ ಹಿಂದೆ ಗಂಗಾವತಿ ಮೂಲದ ಯುವತಿಯನ್ನು ಪ್ರೀತಿಸಿದ್ದರು. ಅವರಿಬ್ಬರ ಮದುವೆಗೆ ಎರಡೂ ಕುಟುಂಬಸ್ಥರಿಂದಲೂ ತೀವ್ರ ವಿರೋಧವಿತ್ತು. ಮನೆಯವರ ವಿರೋಧದ ನಡುವೆಯೂ ಪ್ರೇಮಿಗಳು ಮದ್ವೆಯಾಗಿದ್ದರು. ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. 20 ದಿನದ ಹಿಂದಷ್ಟೇ ಅಯ್ಯಪ್ಪನ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಪ್ರೀತಿಯ ಪ್ರತೀಕವಾಗಿ ಮಗು ಜನಿಸಿದ ಖುಷಿಯಲ್ಲಿದ್ದ ದಂಪತಿ ಬಾಳಲ್ಲಿ ವಿಧಿ ಆಟವಾಡಿಬಿಟ್ಟಿದೆ. ಸುಖ ಜೀವನಕ್ಕೆ ಇನ್ನೇನು ಬೇಕಿಲ್ಲ, ಪತ್ನಿ ಮತ್ತು ಮಗು ಜತೆ ಪ್ರತಿ ಕ್ಷಣವನ್ನೂ ಕಳೆಯಬೇಕು ಅಂದುಕೊಂಡಿದ್ದ ಅಯ್ಯಪ್ಪ ನಿನ್ನೆ ಹೃದಯಾಘಾತಕ್ಕೆ ಬಲಿಯಾದರು.

ಅಯ್ಯಪ್ಪ ನಿಧನರಾದ ಸುದ್ದಿಯನ್ನು ಪೊಲೀಸರು ಕುಟುಂಬಸ್ಥರಿಗೆ ತಿಳಿಸಿದ್ದು, ಮೃತದೇಹವನ್ನು ಸ್ವೀಕರಿಸಲು ಒಪ್ಪಿದ್ದಾರೆ. ಆದರೆ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗುವನ್ನು ಸ್ವೀಕರಿಸಿಲು ನಿರಾಕರಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಅಯ್ಯಪ್ಪ ಅವರ ಹೆಂಡತಿ ಮತ್ತು 20 ದಿನದ ಮಗುವನ್ನು ಸಖಿ ಸೆಂಟರ್​ಗೆ ದಾಖಲಿಸಲಾಗಿದೆ. ಮೃತದೇಹವನ್ನು ಆಂಬುಲೆನ್ಸ್​ ಮೂಲಕ ಬಾದಾಮಿಗೆ ರವಾನಿಸಲಾಗಿದೆ.

ಗಂಡನ ಅಕಾಲಿಕ ಸಾವಿಂದ ಕಂಗೆಟ್ಟ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. ತಂದೆಯನ್ನ ಕಳೆದುಕೊಂಡ ಇನ್ನೂ ಅರಿಯದ ಹಸುಗೂಸನ್ನ ನೋಡಿದ್ರೆ ಎಂಥವರ ಮನವೂ ಕಲಕುತ್ತೆ. ಇಂತಹ ದಯನೀಯ ಸ್ಥಿತಿಯಲ್ಲೂ ಸೊಸೆ-ಮೊಮ್ಮಗುವನ್ನ ಬಿಟ್ಟು ಅಯ್ಯಪ್ಪ ಮೃತದೇಹವನ್ನ ಕುಟುಂಬಂಸ್ಥರು ತೆಗೆದುಕೊಂಡು ಹೋಗಿದ್ದಾರೆ.

https://youtu.be/9nzC7UuG9D8

Share Information
Continue Reading
Advertisement
Click to comment

Leave a Reply

Your email address will not be published. Required fields are marked *