Connect with us

LATEST NEWS

ಲವ್ ಜಿಹಾದ್ ವಿರುದ್ಧ ಹಿಂದೂ ಯುವತಿಯರು ಶಸ್ತ್ರಧಾರಣೆ ಮಾಡಿ – ಸಾಧ್ವಿ ಸರಸ್ವತಿ ದೇವಿ ಕರೆ

ಮಂಗಳೂರು ಅಕ್ಟೋಬರ್ 08: ಲವ್ ಜಿಹಾದ್ ವಿರುದ್ದ ಹೋರಾಡಲು ಕರ್ನಾಟಕದ ಮಹಿಳೆಯರು ಶಸ್ತ್ರ ಧಾರಣೆ ಮಾಡಿ ತಲವಾರ್ ಹಿಡಿಯಬೇಕೆಂದು ಸಾಧ್ವಿ ಸರಸ್ವತಿ ದೇವಿ ಕರೆ ನೀಡಿದ್ದಾರೆ ಬಂಟ್ವಾಳದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಬಜರಂಗಳ ದಿಂದ ಶೌರ್ಯಜಾಗರಣ ರಥ ಯಾತ್ರೆ ಮಾತನಾಡಿದ ಅವರು ಕರ್ನಾಟಕದಲ್ಲಿ ಲವ್ ಜಿಹಾದ್ ವಿರುದ್ದ ಹೋರಾಡಲು ಮಹಿಳೆಯರು ಶಸ್ತಧಾರಣೆ ಮಾಡಬೇಕು ಎಂದರು.


ದೇಶ ಟಿಪ್ಪು ಸುಲ್ತಾನ್ ಔರಂಗಜೇಬನ ಭೂಮಿ ಅಲ್ಲ ಇದು ರಾಮನ, ಭೂಮಿ ಕೃಷ್ಣನ ಭೂಮಿ , ಹನುಮಾನ್ ಜನಿಸಿದ ಭೂಮಿ, ಮಹಾರಾಣಾ ಪ್ರತಾಪ್ ಛತ್ರಪತಿ ಶಿವಾಜಿ ಮಾಹಾರಾಜರ ಭೂಮಿ, ಕರ್ನಾಟಕದಲ್ಲಿರ ಬೇಕಾದರೆ ರಹೀಮ್ ರಸ್ತಾನ್ ಗಳಾಗಿ ಇರಬೇಕು, ಒಂದು ವೇಳೆ ಟಿಪ್ಪುಸುಲ್ತಾನ್ ಔರಂಗಜೇಬ್ ಆಗಲು ಹೊರಟರೆ ಅಂತವರ ಅಸ್ತಿತ್ವವೇ ನಾಶ ವಾಗುತ್ತದೆ ಎಂದ ಅವರು


ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆಗೆ ಅವಕಾಶವಿಲ್ಲ ನಾವೆಲ್ಲರೂ ಹಿಂದೂಗಳು, ಜಾತಿ ವ್ಯವಸ್ಥೆಯಲ್ಲಿ ನಾವು ಬೇರ್ಪಡಬಾರದು. ನಮ್ಮೊಡನೆ ಇದ್ದು ಈಗ ಒಗ್ಗಟ್ಟಾಗಿ ಭೀತಿ ಹುಟ್ಟಿಸುತಿದ್ದಾರೆ ಇದಕ್ಕೆ ಶಿವಮೊಗ್ಗದಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿ. ಹಿಂದೂಗಳ ಅಸ್ತಿತ್ವ ವನ್ನು ಕೆಣಕಿದರೆ ಇಡೀ ಸಮುದಾಯವ ನಾಶ ಮಾಡುವ ತಾಕತ್ತು ಹಿಂದೂಗಳಿಗಿದೆ ನೆನಪಿರಲಿ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *