DAKSHINA KANNADA
ಲವ್ ಜಿಹಾದ್ ಗೆ ತಡೆ,ಯುವಕರಿಗೆ ಫೋಕ್ಸೋ ಕಾಯಿದೆ
ಪುತ್ತೂರು, ಸೆಪ್ಟೆಂಬರ್ 09 : ತನ್ನ ಸಹಪಾಠಿಯಾದ ಅನ್ಯಕೋಮಿಗೆ ಸೇರಿದ ಯುವಕನೊಂದಿಗಿನ ಸಲುಗೆಯನ್ನು ಪ್ರಶ್ನಿಸಲು ಹೋದ ಹಿಂದೂ ಸಂಘಟನೆಗೆ ಸೇರಿದ ಯುವಕರ ಮೇಲೆ ಪುತ್ತೂರಿನ ಸಂಪ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೋಲೀಸರು ಯುವತಿ ಹಾಗೂ ಆಕೆಯ ಪೋಷಕರು ನೀಡಿದ ಲೈಂಗಿಕ ಕಿರುಕುಳ ದೂರಿನ ಹಿನ್ನಲೆಯಲ್ಲಿ ಕನಿಷ್ಟ ಪಕ್ಷ ತನಿಖೆಯನ್ನೂ ನಡೆಸದೆ ಸಂಪ್ಯ ಪೋಲೀಸರು ಯುವಕರಿಬ್ಬರ ಮೇಲೆ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ಹಿನ್ನಲೆ:
ಪುತ್ತೂರು ತಾಲೂಕಿನ ಮೈಂದನಡ್ಕ ನಿವಾಸಿಯಾಗಿರುವ ಪ್ರಸ್ತುತ ಸುಳ್ಯ ಸರಕಾರಿ ಕಾಲೇಜಿನಲ್ಲಿ ಓದುತ್ತಿರುವ ಅನ್ಯಕೋಮಿನ ವಿದ್ಯಾರ್ಥಿಯೋರ್ವ ಅದೇ ಪರಿಸರದ ಹಿಂದೂ ಯುವತಿಗೆ ತೊಂದರೆ ನೀಡುತ್ತಿದ್ದಾನೆ ಎನ್ನುವ ವಿಚಾರವನ್ನು ಸ್ವತಹ ಅದೇ ಯುವತಿಯಿಂದ ತಿಳಿದುಕೊಂಡ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಮಂಜೇಶ್ ಮತ್ತು ಹರೀಶ್ ಎನ್ನುವ ಯುವಕರು ಆ ಯುವಕನನ್ನು ಪ್ರಶ್ನಿಸುದಕ್ಕೋಸ್ಕರ ಸೆಪ್ಟೆಂಬರ್ 5 ರಂದು ಕೌಡಿಚ್ಚಾರ್ ಬಸ್ ನಿಲ್ದಾಣದಲ್ಲಿ ಕಾದು ಕೂತಿದ್ದರು.
ಯುವಕ ಬಸ್ ನಿಲ್ದಾಣಕ್ಕೆ ಬಂದ ತಕ್ಷಣ ಯುವಕನನ್ನು ಹಿಡಿದಿದ್ದಾರೆ.ಈ ಸಮಯದಲ್ಲಿ ಯುವಕನ ಮೊಬೈಲ್ ನಲ್ಲಿ ದೂರು ನೀಡಿದ ಯುವತಿಯ ಜೊತೆಗೆ ಕೌಡಿಚ್ಚಾರಿನ ಇನ್ನೋರ್ವ ವಿದ್ಯಾರ್ಥಿನಿಯ ಜೊತೆ ಸಲುಗೆಯದಿರುವುದು ಗಮನಕ್ಕೆ ಬಂದಿದೆ. ಆ ವಿಚಾರನ್ನು ಹುಡುಗಿಯ ಜೊತೆ ಚರ್ಚಿಸಿದ ಬಳಿಕ ಮತ್ತೆ ಆ ಯುವಕನೊಂದಿಗೆ ಸಂಪರ್ಕವಿಡದಂತೆ ಎಚ್ಚರಿಕೆಯನ್ನೂ ನೀಡಿದ್ದರು.
ಅನ್ಯಕೋಮಿನ ಯುವಕ ಮೊಬೈಲ್ ನಲ್ಲಿ ವಿದ್ಯಾರ್ಥಿನಿಯ ಫೋಟೋವನ್ನು ಆತನ ವಾಟ್ಸಪ್ ಡಿಪಿ ಯಲ್ಲಿ ಹಾಕಿ ಅದಕ್ಕೆ ಐ ಲವ್ ಯೂ ಎನ್ನುವ ಟ್ಯಾಗ್ ಲೈನನ್ನೂ ಸೇರಿಸಿದ್ದ. ಅಲ್ಲದೆ ಸುಳ್ಯದಿಂದ ಪುತ್ತೂರುವರೆಗಿನ ಸುಮಾರು 18 ಹಿಂದೂ ಯುವತಿಯರೊಂದಿಗೆ ಸಲುಗೆಯಿಂದ ಇದ್ದ ಮೆಸೇಜ್ ಗಳನ್ನೂ ಹಿಂದೂ ಸಂಘಟನೆಗಳಿಗೆ ಸೇರಿದ ಯುವಕರು ಗಮನಿಸಿದ್ದಾರೆ.ಈ ಎಲ್ಲಾ ವಿಚಾರವನ್ನು ಕೌಡಿಚ್ಚಾರಿನ ಯುವತಿಯ ಮನೆಗೂ ತಿಳಸಿದ್ದಾರೆ.ಬಳಿಕ ನಡೆದ ಬೆಳವಣಿಗೆಯಲ್ಲಿ ಯುವತಿಯ ಪೋಷಕರು ಮಂಜೇಶ್ ಹಾಗೂ ಹರೀಶ್ ವಿರುದ್ಧ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ದೂರನ್ನು ಸಂಪ್ಯ ಪೋಲೀಸ್ ಠಾಣೆಯಲ್ಲಿ ನೀಡಿದ್ದಾರೆ.
ಸಂಪ್ಯ ಎಸ್.ಐ.ಅಬ್ದುಲ್ ಖಾದರ್ ಇಬ್ಬರು ಯುವಕರನ್ನು ಠಾಣೆಗೆ ಕರೆಸಿದ್ದಾರೆ.ಯುವಕರ ಜೊತೆಗೆ ಹಿಂದೂ ಸಂಘಟನೆಯ ಮುಖಂಡರು ಹಾಗೂ ಯುವತಿಯ ಸಂಬಂಧಿಕರೊಂದಿಗೆ ಮಾತುಕತೆ ನಡೆಸಿ ದೂರನ್ನು ಹಿಂಪಡೆಯಲು ನಿರ್ಧರಿಸಲಾಗಿತ್ತು. ಆದರೆ ಅಷ್ಟೊತ್ತಿಗೆ ಎಸ್.ಐ ಇಬ್ಬರ ಮೇಲೂ ಫೋಕ್ಸೋ ಪ್ರಕರಣವನ್ನು ದಾಖಲಿಸಿ ಆಗಿತ್ತು. ಇಲ್ಲಿ ಪ್ರಶ್ನೆಯಿರುವುದು ಪೋಲೀಸರು ಪ್ರಕರಣ ದಾಖಲಿಸಿದರ ಕುರಿತಲ್ಲ.
ಲವ್ ಜಿಹಾದ್ ನ ಗಂಭೀರತೆಯನ್ನು ಪರಿಗಣಿಸಿ ಕೇರಳ ಹೈಕೋರ್ಟ್ ಲವ್ ಜಿಹಾದ್ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿರುವಾಗ ದಕ್ಷಿಣಕನ್ನಡ ಜಿಲ್ಲೆ ಅದರಲ್ಲೂ ಕೇರಳ ರಾಜ್ಯದ ಗಡಿಭಾಗವಾದ ಪುತ್ತೂರಿನಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು ಪೋಲೀಸ್ ಇಲಾಖೆ ಇಷ್ಟೊಂದು ಕೆರ್ ಲೆಸ್ ಆಗಿ ತೆಗೆದುಕೊಳ್ಳಲು ಕಾರಣವೇನು.
ಕೌಡಿಚ್ಚಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಆರೋಪಿಸುತ್ತಿರುವ ಅನ್ಯಕೋಮಿನ ವಿದ್ಯಾರ್ಥಿಯನ್ನು ಕನಿಷ್ಟ ವಿಚಾರಣೆಯನ್ನೂ ನಡೆಸದೇ ಬಿಟ್ಟಿರುವುದು ಸಂಪ್ಯ ಪೋಲೀಸರ ಮೇಲೆ ಅನುಮಾನವನ್ನೂ ಹುಟ್ಟಿಸುತ್ತಿದೆ.ಇದೇ ಕಾರಣಕ್ಕಾಗಿ ಹಿಂದೂ ಸಂಘಟನೆಗಳು ಸಂಪ್ಯ ಎಸ್.ಐ.ಅಬ್ದುಲ್ ಖಾದರ್ ವಿರುದ್ಧ ಪ್ರತಿಭಟನೆಗೂ ಸಜ್ಜಾಗಿದ್ದಾರೆ. ಸೆಪ್ಟೆಂಬರ್ 15 ರಂದು ಪುತ್ತೂರಿನಲ್ಲಿ ಪ್ರತಿಭಟನೆಗೆ ದಿನಾಂಕವೂ ನಿಗದಿಯಾಗಿದ್ದು, ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ್ ಪ್ರಮುಖ ಭಾಷಣವನ್ನೂ ನಡೆಸಲಿದ್ದಾರೆ.
You must be logged in to post a comment Login