LATEST NEWS
ಬಾವಿಗೆ ಬಿದ್ದ ರಸಗೊಬ್ಬರ ತುಂಬಿದ್ದ ಲಾರಿ

ಉಡುಪಿ ನವೆಂಬರ್ 4: ರಸಗೊಬ್ಬರ ಸಾಗಾಟದ ಲಾರಿಯೊಂದು ಬಾವಿಗೆ ಬಿದ್ದ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಟಿಎಪಿಎಂಸಿಗೆ ಬಂದ ಲಾರಿ ಗೋಡೌನ್ ಸಮೀಪ ರಿವರ್ಸ್ ತೆಗೆಯುವ ವೇಳೆ ನಿಯಂತ್ರಣ ತಪ್ಪಿ 30 ಅಡಿ ಆಳದ ತೆರೆದ ಬಾವಿಗೆ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಬಾವಿಗೆ ಬಿದ್ದ ಪರಿಣಾಮ 1.36 ಲಕ್ಷ ಮೌಲ್ಯದ 20ಟನ್ ರಸಗೊಬ್ಬರ ನೀರುಪಾಲಾಗಿದೆ. ಘಟನೆ ಕುರಿತಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
