LATEST NEWS
ತೊಕ್ಕೊಟ್ಟು ಜಂಕ್ಷನ್ ಲಾರಿ ಮಗುಚಿ ಕ್ಲೀನರ್ ಸಾವು

ತೊಕ್ಕೊಟ್ಟು ಜಂಕ್ಷನ್ ಲಾರಿ ಮಗುಚಿ ಕ್ಲೀನರ್ ಸಾವು
ಮಂಗಳೂರು ಡಿಸೆಂಬರ್ 18: ತೊಕ್ಕೊಟ್ಟು ಜಂಕ್ಷನ್ ನಲ್ಲಿ ಲಾರಿಯೊಂದು ಮುಗುಚಿದ ಪರಿಣಾಮ ಲಾರಿ ಕ್ಲಿನರ್ ಸಾವನಪ್ಪಿರುವ ಘಟನೆ ನಡೆದಿದೆ.
ತೊಕ್ಕೊಟ್ಟು ಜಂಕ್ಷನ್ ಬಳಿ ಟ್ರಾಫಿಕ್ ಪೊಲೀಸರು ಲಾರಿ ನಿಲ್ಲಿಸಿ ಕೇಸ್ ಹಾಕಲು ಮುಂದಾದಾಗ ಚಾಲಕ ಲಾರಿ ನಿಲ್ಲಿಸದೆ ರಸ್ತೆ ಬದಿಗೆ ತೆರಳಿದ ಸಂದರ್ಭ ಲಾರಿ ಚಕ್ರ ಒಳಚಂರಡಿಗೆ ಸಿಕ್ಕಿ ಲಾರಿ ಮಗುಚಿ ಬಿದ್ದಿದೆ. ಈ ಸಂದರ್ಭ ಲಾರಿ ಕ್ಲೀನರ್ ಬಿದ್ದ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೃತ ಲಾರಿ ಕ್ಲೀನರ್ ನನ್ನು ಶಿವಮೊಗ್ಗ ನಿವಾಸಿ ವಸಂತ್ ಕುಮಾರ್ (25) ಎಂದು ತಿಳಿದುಬಂದಿದೆ.
ತೊಕ್ಕೊಟ್ಟು ಜಂಕ್ಷನ್ ನಲ್ಲಿ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುವ ಟ್ರಾಪಿಕ್ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸುಮಾರು ಎರಡು ಗಂಟೆಗಳ ಕಾಲ ನೂರಾರು ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಕೆಲ ಗಂಟೆಗಳ ಕಾಲ ರಸ್ತೆ ಬ್ಲಾಕ್ ಆಗಿತ್ತು.