DAKSHINA KANNADA
ಮಧ್ಯ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಭಾರೀ ಗಾತ್ರದ ಮರದ ದಿಮ್ಮಿಗಳಿರುವ ಲಾರಿ

ಪುತ್ತೂರು ಅಗಸ್ಟ್ 4: ರಾಷ್ಟ್ರೀಯ ಹೆದ್ದಾರಿ 75ರ ಬೋಳಂಗಡಿ ಎಂಬಲ್ಲಿ ಭಾರೀ ಗಾತ್ರದ ಮರದ ದಿಮ್ಮಿಗಳಿರುವ ಲಾರಿಯೊಂದು ರಸ್ತೆ ಮಧ್ಯೆಯೇ ವಾಲಿಕೊಂಡು ನಿಂತಿರುವ ಘಟನೆ ನಡೆದಿದೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ರಸ್ತೆ ಮೇಲೆ ಉರುಳುವ ಅಪಾಯಕಾರಿ ಸ್ಥಿತಿಯಲ್ಲಿ ಮರ ತುಂಬಿದ ಲಾರಿ ನಿಂತಿದೆ. ಲಾರಿ ನಿಂತಿರುವ ರೀತಿಗೆ ಅದು ಯಾವುದೇ ಸಂದರ್ಭದಲ್ಲಿ ಪಲ್ಟಿಯಾಗುವ ಸಾಧ್ಯತೆ ಇದ್ದು, ಮರದ ದಿಮ್ಮಿಗಳು ರಸ್ತೆಗಪ್ಪಳಿಸಲಿವೆಯ ರಾಷ್ಟ್ರೀಯ ಹೆದ್ದಾರಿಯಾಗಿರುವ ಹಿನ್ನಲೆ ಹೆಚ್ಚಿನ ವಾಹನ ದಟ್ಟಣೆ ಇದ್ದು, ಪೋಲೀಸರಿಂದ ಟ್ರಾಫಿಕ್ ನಿಯಂತ್ರಣಕ್ಕೆ ಹರ ಸಾಹಸ ಪಡುತ್ತಿದ್ದು, ಈಗ ಇಡೀ ಹೆದ್ದಾರಿಯನ್ನು ಬಂದ್ ಮಾಡಿದ್ದಾರೆ.
