Connect with us

    LATEST NEWS

    ಕಾಸರಗೋಡು – ದಕ್ಷಿಣಕನ್ನಡ ಪ್ರಯಾಣಕ್ಕೆ ನಿತ್ಯ ಪಾಸ್

    ಮಂಗಳೂರು ಅಗಸ್ಟ್ 4: ಕೊರೊನಾ ಲಾಕ್ ಡೌನ್ ಪ್ರಾರಂಭದಿಂದಲೂ ಗಡಿ ಬಂದ್ ವಿಚಾರದಲ್ಲಿ ಕಾಸರಗೋಡು ದಕ್ಷಿಣಕನ್ನಡ ಜಿಲ್ಲಾಡಳಿತಗಳ ಜಿದ್ದಾಜಿದ್ದಿ ಸದ್ಯ ಸರಿ ಹೋಗುವ ಹಂತಕ್ಕೆ ತಲುಪಿದೆ ಎಂದು ಹೇಳಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೂತನ ಜಿಲ್ಲಾಧಿಕಾರಿ ಅಧಿಕಾರವಹಿಸಿಕೊಂಡ ನಂತರ ಕಾಸರಗೋಡು ಜಿಲ್ಲಾಡಳಿತದ ಜೊತೆಗಿನ ಮಾತುಕತೆ ಫಲಪ್ರದವಾಗಿದ್ದು, ಉದ್ಯೋಗ, ಶಿಕ್ಷಣ ಸೇರಿದಂತೆ ನಿತ್ಯವೂ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು, ಹೋಗುವವರಿಗೆ ಪಾಸ್‌ ವ್ಯವಸ್ಥೆ ಪುನರಾರಂಭಿಸಲು ಕಾಸರಗೋಡು ಜಿಲ್ಲಾಡಳಿತ ನಿರ್ಧರಿಸಿದೆ.


    ಈ ಸಂಬಂಧ ಕಾಸರಗೋಡು ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್‌, ನಿತ್ಯ ಕರ್ನಾಟಕಕ್ಕೆ ಬಂದು ಹೋಗುವವರಿಗೆ ಪಾಸ್‌ ನೀಡುವುದಾಗಿ ಪ್ರಕಟಿಸಿದ್ದಾರೆ.  ಪಾಸ್‌ ಪಡೆದು ಕರ್ನಾಟಕಕ್ಕೆ ಹೋಗಿ, ಬರುವವರು ವಾರಕ್ಕೊಮ್ಮೆ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌ ಮೂಲಕ ಕೋವಿಡ್‌ ಸೋಂಕು ಪತ್ತೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕರ್ನಾಟಕಕ್ಕೆ ಆಹಾರ ಉತ್ಪನ್ನಗಳನ್ನು ಸಾಗಿಸುವ ವಾಹನಗಳ ಸಿಬ್ಬಂದಿಯೂ ಈ ರೀತಿ ಪರೀಕ್ಷೆಗೆ ಒಳಗಾಗಬೇಕು’ ಎಂದು ಚಂದ್ರಶೇಖರನ್‌ ತಿಳಿಸಿದರು.


    ವಿವಾಹ, ಮರಣ ಮತ್ತಿತರ ಕಾರಣಗಳಿಗಾಗಿ ಅಂತರರಾಜ್ಯ ಪ್ರಯಾಣ ಮಾಡುವುದಕ್ಕೂ ಕೇರಳ ಸರ್ಕಾರ ಅನುಮತಿ ನೀಡಿದೆ. ಅಂತಹವರು ಕೂಡ ಏಳು ದಿನಗಳೊಳಗೆ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ. ಕೋವಿಡ್‌ ಸೋಂಕು ಪತ್ತೆಯಾದ ಕ್ಲಸ್ಟರ್‌ಗಳ ಹೊರತಾದ ಪ್ರದೇಶಗಳಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 9 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.


    ಕಾಸರಗೋಡಿನಲ್ಲಿ ಕೊರೊನಾ ಪ್ರಕರಣಗಳ ಹಿನ್ನಲೆ ಮೊದಲು ದಕ್ಷಿಣಕನ್ನಡ ಜಿಲ್ಲಾಡಳಿತ ಕಾಸರಗೋಡಿನ ಗಡಿಗಳನ್ನು ಬಂದ್ ಮಾಡಿತ್ತು. ನಂತರ ದಕ್ಷಿಣಕನ್ನಡದಲ್ಲಿ ಅತಿ ಹೆಚ್ಚು ಕೊರೊನ ಪ್ರಕರಣ ದಾಖಲಾದ ಕಾರಣದ ಕಾಸರಗೋಡು ಜಿಲ್ಲಾಡಳಿತ ಗಡಿಗಳನ್ನು ಬಂದ್ ಮಾಡಿತ್ತು. ಈ ಎರಡು ಜಿಲ್ಲಾಡಳಿತಗಳ ಗಲಾಟೆಯಿಂದ ಎಷ್ಟೋ ಜನರು ಉದ್ಯೋಗಳ ಕಳೆದುಕೊಂಡಿದ್ದಾರೆ.  ಎರಡು ಜಿಲ್ಲಾಡಳಿತ ಗಡಿ ಬಂದ್ ಮಾಡಿದರೂ ಎರಡು ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳೇನು ಕಡಿಮೆಯಾಗಿಲ್ಲ. ಪ್ರತಿಷ್ಟೆಗೋಸ್ಕರ ಮಾಡಿದ ಗಡಿಬಂದ್ ನಿಂದಾಗಿ ಜನಸಾಮನ್ಯರು ಮಾತ್ರ ಸಮಸ್ಯೆಯಲ್ಲಿ ಸಿಲುಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply