Connect with us

  LATEST NEWS

  ಪುಣೆ -ಲೋನಾವಾಲಾ ಭೂಶಿ ಅಣೆಕಟ್ಟು ಜಲಪಾತದ ಬಳಿ ನೀರಿನಲ್ಲಿ ಕೊಚ್ಚಿಹೋದ ಐದು ಮಂದಿ – ವಿಡಿಯೋ ವೈರಲ್

  ಪುಣೆ ಜೂನ್ 30: ಭೀಕರ ದುರಂತವೊಂದರಲ್ಲಿ ಐದು ಮಂದಿ ಜಲಪಾತದ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ. ಜಲಪಾತದ ಬಳಿ ಸಿಲುಕಿಕೊಂಡರು ಯಾರಿಂದಲೂ ರಕ್ಷಣೆ ಮಾಡಲಾಗದೇ ಅಷ್ಟೂ ಜನ ನೀರು ಪಾಲಾಗಿದ್ದಾರೆ. ಅದರಲ್ಲಿ ಮೂವರು ಸಣ್ಣಮಕ್ಕಳುಸೇರಿದ್ದಾರೆ.


  ಮಹಾರಾಷ್ಟ್ರದ ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟೆಯ ಹಿನ್ನೀರಿನ ಸಮೀಪವಿರುವ ಜಲಪಾತದಲ್ಲಿ ಭಾನುವಾರ ಮಹಿಳೆ ಸೇರಿದಂತೆ ಐವರು ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಐವರು ವಿಹಾರಕ್ಕೆಂದು ಬಂದಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

  ಪುಣೆಯ ಸಯ್ಯದ್ ನಗರಕ್ಕೆ ಸೇರಿದ ಒಂದೇ ಕುಟುಂಬದ 5 ಜನರು ಮೃತಪಟ್ಟಿದ್ದಾರೆ. ಇವರೆಲ್ಲ ಪಿಕ್ನಿಕ್‌ಗೆ ಎಂದು ಭೂಶಿ ಅಣೆಕಟ್ಟಿನ ಹಿನ್ನೀರಿನ ಸಮೀಪದ ಜಲಪಾತಕ್ಕೆ ಬಂದಿದ್ದರು. ಈ ವೇಳೆ ಏಕಾಏಕಿ ಜಲಪಾತದಲ್ಲಿ ನೀರಿನ ರಭಸ ಜಾಸ್ತಿಯಾಗಿದೆ. ಈ ವೇಳೆ ಅವರಿಗೆ ದಡಕ್ಕೆ ಬರಲಾಗದೇ ನೀರಿನ ಮಧ್ಯವೇ ನಿಂತಿದ್ದರೂ ಆದರೆ ನೀರು ಜಾಸ್ತಿಯಾದ ಬೆನ್ನಲ್ಲೇ ಎಲ್ಲರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸದ್ಯ ನೀರಲ್ಲಿ ಮುಳುಗಿ ಸಾವನ್ನಪ್ಪಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು 2 ಮೃತದೇಹಗಳನ್ನು ಈಗಾಗಲೇ ಹೊರ ತೆಗೆಯಲಾಗಿದೆ. ಇನ್ನುಳಿದ ಶವಗಳನ್ನು ಪತ್ತೆ ಹಚ್ಚಲು ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

   

  Share Information
  Advertisement
  Click to comment

  You must be logged in to post a comment Login

  Leave a Reply