LATEST NEWS
ಮಂಗಳೂರು- ಭ್ರಷ್ಟಾಚಾರದ ಆರೋಪ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ

ಮಂಗಳೂರು ಜೂನ್ 21: ಮಂಗಳೂರು ಮಹಾನಗರಪಾಲಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಹಿನ್ನಲೆ ಪಾಲಿಕೆಯ ವಿವಿಧ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಿಗ್ಗೆ ಶನಿವಾರ ಬೆಳಗ್ಗೆ ಸುಮಾರು 11:30 ಘಂಟೆಯ ಸಮಯ ಮಹಾ ನಗರ ಪಾಲಿಕೆಗೆ ದಿಡೀರ್ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಪಾಲಿಕೆಯ ಎಂಜಿನಿಯರಿಂಗ್, ಯೋಜನೆ, ಕಂದಾಯ, ಲೆಕ್ಕ ಪತ್ರವಿಭಾಗಳ ಕಡತಗಳ ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ಪ್ರಭಾರ ಎಸ್ಪಿ ಕುಮಾರ ಚಂದ್ರ ಅವರ ನೇತೃತ್ವದಲ್ಲಿ ಇಬ್ಬರು ಡಿ.ವೈ.ಎಸ್.ಪಿ ಹಾಗೂ ನಾಲ್ಕು ಮಂದಿ ಇನ್ಸ್ಪೆಕ್ಟರ್ಗಳು ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.