LATEST NEWS
ಮಂಗಳೂರು – ಲಕ್ಕಿ ಸ್ಕೀಮ್ ಗಳ ವಿರುದ್ದ ಪ್ರಕರಣ ದಾಖಲಿಸಿ – ಪೊಲೀಸ್ ಕಮಿಷನರ್ ಗೆ ಉಪಲೋಕಾಯುಕ್ತ ಸೂಚನೆ
ಮಂಗಳೂರು ಡಿಸೆಂಬರ್ 04: ಕರಾವಳಿಯಲ್ಲಿ ನಡೆಯುತ್ತಿರುವ ಲಕ್ಕಿ ಸ್ಕೀಮ್ ಗಳ ವಿರುದ್ದ ಪ್ರಕರಣ ದಾಖಲಿಸುವಂತೆ ಪೊಲೀಸ್ ಕಮಿಷನರ್ ಗೆ ಉಪಲೋಕಾಯುಕ್ತ ಬಿ. ವೀರಪ್ಪ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಟೀಮ್ ವ್ಯವಹಾರದಲ್ಲಿ ನಾನಾ ರೀತಿ ಆಮಿಷ ತೋರಿಸಿ ಕೋಟ್ಯಂತರ ರು. ಹಣ ಸಂಗ್ರಹಿಸುವ ಬಗ್ಗೆ ನಾಗರಿಕರೊಬ್ಬರು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಕೇಸು ದಾಖಲಿಸುವ ಮಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಲಾಗಿದೆ ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಹೇಳಿದರು.
ಮೋಸಗೊಳ್ಳುವವರು ಮೋಸಗೋಳಿಸುವವರು ಇರುತ್ತಾರೆ, 1 ಸಾವಿರ ರೂಪಾಯಿಗೆ ತಿಂಗಳಿಗೊಂದು ಪ್ಲ್ಯಾಟ್ ಕೊಡಲು ಸಾಧ್ಯವೆ.. ಜನರು ಈ ಬಗ್ಗೆ ಜಾಗೃತರಾಬೇಕು. ಪದೇಪದೇ ಮೋಸ ಹೋಗುವುದು ಸರಿಯಲ್ಲ, ನನಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಕ್ರಮಕೈಗೊಳ್ಳಲಿದ್ದಾರೆ ಎಂದರು. ಪೊಲೀಸ್ ಕಮಿಷನರ್ ಅಗರ್ವಾಲ್ ಅವರು ಸ್ಕೀಮ್ ಆರೋಪಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತರ ಸೂಚನೆಯಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು. ಈವರೆಗೆ ಯಾರೂ ಅಧಿಕೃತವಾಗಿ ದೂರು ನೀಡದ ಕಾರಣ ಪ್ರಕರಣ ದಾಖಲಿಸಲು ಸಾಧ್ಯವಾಗಿಲ್ಲ ಲೋಕಾಯುಕ್ತರ ಶಿಫಾರಸು ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದರು