Connect with us

    LATEST NEWS

    ಲೋಕಸಮರ@24: 21 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊದಲ ಹಂತದ ಮತದಾನ ಪ್ರಾರಂಭ..!

    ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭವಾಗಿದ್ದು, 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ಮೊದಲ ಹಂತದ ಮತದಾನ ಆರಂಭವಾಗಿದ್ದು ಅನೇಕ ಗಣ್ಯರು ಮತದಾನದ ಪ್ರಕ್ರೀಯೆಯಲ್ಲಿ ಪಾಲ್ಗೊಂಡರು.

    ಮತ ಚಲಾಯಿಸಲು 16.63 ಕೋಟಿಗೂ ಹೆಚ್ಚು ಮಂದಿ ಅರ್ಹತೆ ಪಡೆದಿದ್ದಾರೆ.ಮೊದಲ ಹಂತದ ಮತದಾನದಲ್ಲಿ 102 ಸ್ಥಾನಗಳಲ್ಲಿ 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    ಅದರಲ್ಲಿ 134 ಮಹಿಳಾ ಅಭ್ಯರ್ಥಿಗಳು ಮತ್ತು 1491 ಪುರುಷ ಅಭ್ಯರ್ಥಿಗಳಾಗಿದ್ದಾರೆ.ತಮಿಳುನಾಡಿನ 39, ಉತ್ತರ ಪ್ರದೇಶದ 8, ಮಹಾರಾಷ್ಟ್ರದ 5, ರಾಜಸ್ಥಾನದ 12, ಬಿಹಾರದ 4, ನಾಗಾಲ್ಯಾಂಡ್‌ನ 1, ಅಸ್ಸಾಂನ 4, ಛತ್ತೀಸ್‌ಗಡದ 1, ಮಧ್ಯಪ್ರದೇಶದ 6, ಮಣಿಪುರದ 2, ಮಿಜೋರಾಂ ನ 1, ಮೇಘಾಲಯದ 2, ಅರುಣಾಚಲ ಪ್ರದೇಶದ 2, ಉತ್ತರಾಖಂಡದ 5, ಪಶ್ಚಿಮ ಬಂಗಾಳದ 3, ತ್ರಿಪುರಾದ 1, ಸಿಕ್ಕಿಂನ 1 ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರದ 1, ಲಕ್ಷದ್ವೀಪದ 1 ಹಾಗೂ ಪುದುಚೇರಿಯ 1 ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ.

    ನಾಗಪುರದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಮಧ್ಯಪ್ರದೇಶದಲ್ಲಿ ಮಾಜಿ ಸಿಎಂ ಕಮಲ್‌ ನಾಥ್‌, ಅವರ ಪುತ್ರ ನಕುಲ್‌ ನಾಥ್‌, ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಸ್ಟಾಲಿನ್‌, ನಟರಾದ ರಜನಿಕಾಂತ್‌, ಕಮಲ್‌ ಹಾಸನ್ ಬಿಜೆಪಿ ಮುಖಂಡ ಅಣ್ಣಾಮಲ್ಲೈ, ಕಾಂಗ್ರೆಸ್‌ ನಾಯಕ ಚಿದಂಬಂರಂ, ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕ ಕೆ. ಪಳನಿಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಮತದಾನ ಮಾಡಿದರು. ಮತದಾನವು ಬೆಳಿಗ್ಗೆ 7 ಗಂಟೆಗೆ ಶುರುವಾಗಿದ್ದು, ಸಂಜೆ 6ಕ್ಕೆ ಮುಕ್ತಾಯವಾಗಲಿದೆ. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಒಂದೆಡೆಯಿಂದ ಇನ್ನೊಂದೆಡೆ ಕರೆದೊಯ್ಯಲು 41 ಹೆಲಿಕಾಪ್ಟರ್‌ಗಳು, 84 ವಿಶೇಷ ರೈಲುಗಳು ಹಾಗೂ ಸರಿಸುಮಾರು ಒಂದು ಲಕ್ಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply