Connect with us

DAKSHINA KANNADA

ಲೋಕಸಭಾ ಚುನಾವಣೆ ದಕ್ಷಿಣಕನ್ನಡಕ್ಕೆ ಕಾಂಗ್ರೇಸ್ ಅಭ್ಯರ್ಥಿ ಯಾರು..ಸಭೆಯಲ್ಲಿ ರಮಾನಾಥ ರೈ ಸೇರಿದಂತೆ ಹಲವರ ಹೆಸರು ಪ್ರಸ್ತಾಪ…!!

ಮಂಗಳೂರು ಡಿಸೆಂಬರ್ 04: ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣಕನ್ನಡ ಜಿಲ್ಲೆಯಿಂದ ಪ್ರಬಲ ಅಭ್ಯರ್ಥಿಗಾಗಿ ಕಾಂಗ್ರೇಸ್ ಸರ್ವೆ ಕಾರ್ಯ ಆರಂಭಿಸಿದ್ದು, ಕಾಂಗ್ರೇಸ್ ಮುಖಂಡರ ಅಭಿಪ್ರಾಯ ಸಂಗ್ರಹಿಸರು ಸಚಿವ ಮಧುಬಂಗಾರಪ್ಪ ಮಂಗಳೂರಿಗೆ ಆಗಮಿಸಿ ಸಭೆಗಳನ್ನು ನಡೆಸಿದ್ದಾರೆ.ಅಭಿಪ್ರಾಯ ಸಂಗ್ರಹಣೆಗಾಗಿ ಬಂದ ಮಧು ಬಂಗಾರಪ್ಪ ಮುಂದೆ ಮಂಗಳೂರಿನಲ್ಲಿ ಮಾಜಿ ಸಚಿವ ಬಿ‌ ರಮಾನಾಥ ರೈ ಅವರ ಹೆಸರನ್ನು ಎಂಟು ಬ್ಲಾಕ್ ಗಳ ಪ್ರಮುಖರು ಸೂಚಿಸಿದ್ದಾರೆ ಎಂಬ ವಿಚಾರ ಕಾಂಗ್ರೆಸ್ ವಲಯದಿಂದ ಕೇಳಿ ಬಂದಿದೆ. ಇನ್ನುಳಿದಂತೆ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮತ್ತು ಉದ್ಯಮಿ ಇನಾಯತ್ ಆಲಿ ಪರ ಕಾಂಗ್ರೆಸ್ ಮುಂಚೂಣಿ ಘಟಕದ ನಾಯಕರಿಂದ ಹೆಸರು ಪ್ರಸ್ತಾಪವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶನಿವಾರ ಸಂಜೆ 7 ಗಂಟೆಯಿಂದ ಸುಮಾರು ಮಧ್ಯ ರಾತ್ರಿ 12 ಗಂಟೆವರೆಗೂ ಮಧು ಬಂಗಾರಪ್ಪ ಅವರು ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ನ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ವಿವಿಧ ಬ್ಲಾಕ್ ಗಳ ಮುಂಚೂಣಿ ನಾಯಕರಗಳಿಂದ ಗೌಪ್ಯವಾಗಿ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.


ಹೈ ಕಮಾಂಡ್ ನಿಮ್ಮ ಅಭಿಪ್ರಾಯವನ್ನು ಸಂಗ್ರಹಿಸಿ ಕಳುಹಿಸಲು ತಿಳಿಸಿದ್ದಾರೆ .ಆದರೆ ಇದು ಅಭ್ಯರ್ಥಿಗಳ ಅಂತಿಮ ಆಯ್ಕೆಯಲ್ಲ, ನಾನು ಹೈಕಮಾಂಡ್ ನೀಡಿರುವ ಜವಾಬ್ದಾರಿಯನ್ನು ಮಾಡುತ್ತೇನೆ. ಜೊತೆಗೆ ಹೈಕಮಾಂಡ್ ಸರ್ವೇ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ , ಸರ್ವೇಯಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನು ಕೇಂದ್ರದ ನಾಯಕರು ಆಯ್ಕೆ ಮಾಡಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಎಂಟು ವಿಧಾನಸಭಾ ಕ್ಷೇತ್ರದ ವಿವಿಧ ಬ್ಲಾಕ್ ಗಳ ಪ್ರಮುಖ ನಾಯಕರುಗಳು ಬೇರೆಬೇರೆಯಾಗಿ ಬಂದು ಗೌಪ್ಯ ವಾಗಿ ಅಭಿಪ್ರಾಯ ನೀಡಬಹುದು ಮುಂಜಾನೆಯಾದರೂ ಪರವಾಗಿಲ್ಲ, ಅತ್ಯಂತ ತಾಳ್ಮೆಯಿಂದ ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದು ಎಂದಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಬಂಟ್ವಾಳ,ಪುತ್ತೂರು, ಮಂಗಳೂರು, ಸುರತ್ಕಲ್, ಸುಳ್ಯ ಮತ್ತು ಮೂಡುಬಿದಿರೆ ಒಂಟು ಆರು ವಿಧಾನ ಸಭಾ ಕ್ಷೇತ್ರದ ಪ್ರಮುಖರು ಅಭಿಪ್ರಾಯ ‌ಸಂಗ್ರಹದ ವೇಳೆ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಬೆಳ್ತಂಗಡಿಯ ಒಂದು ಬ್ಲಾಕ್ ಮತ್ತು ಉಳ್ಳಾಲದಲ್ಲಿಯೂ ಒಂದು ಬ್ಲಾಕ್ ರೈ ಪರವಾಗಿ ಬ್ಯಾಟ್ ಬೀಸಿದ್ದಾರೆ ಎಂಬ ಮಾಹಿತಿಯನ್ನು ಕಾಂಗ್ರೇಸಿಗರು ನೀಡಿದ್ದಾರೆ. ಲೋಬೋ ಮತ್ತು ಶಕುಂತಲಾ ಶೆಟ್ಟಿ ಅವರು ವಿನಯ ಕುಮಾರ್ ಸೊರಕೆಗೆ ಎಂ.ಪಿ.ಟಿಕೆಟ್ ನೀಡಿದರೆ ಉತ್ತಮ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಇವರ ಜೊತೆಗೆ ಬೆಳ್ತಂಗಡಿಯ ಕ್ಷೇತ್ರದ ಕಾರ್ಯಕರ್ತರು ಹರೀಶ್ ಕುಮಾರ್ ಮತ್ತು ಉಳ್ಳಾಲದ ಕಾರ್ಯಕರ್ತರು ಇನಾಯತ್ ಆಲಿ ಅವರ ಹೆಸರುಗಳು ಮಧುಬಂಗಾರಪ್ಪ ರವರ ಮುಂದೆ ಪ್ರಸ್ತಾಪವಾಯಿತು. ಆದರೆ ಬಹುತೇಕ ಎಲ್ಲಾ ಎಂಟು ವಿಧಾನ ಸಭಾ ಕ್ಷೇತ್ರದ ಪ್ರಮುಖ ಕಾರ್ಯಕರ್ತರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಹೆಸರು ಉಲ್ಲೇಖ ಮಾಡಿ, ಅವರಿಗೆ ಈ ಬಾರಿಯ ಲೋಕಸಭಾ ಚುನಾವಣಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *