BELTHANGADI
ಕರಾವಳಿಗೂ ತಟ್ಟಿದೆಯಾ ಮಿಡತೆ ಹಾವಳಿ……!!ಪಾಕಿಸ್ಥಾನ, ರಾಜಸ್ಥಾನ ಕಡೆಯಿಂದ ಬಂದಿರುವ ಮಿಡತೆಗಳ ಹಾವಳಿ ಈಗ ಕರಾವಳಿಗೆ
ಕರಾವಳಿಗೂ ತಟ್ಟಿದೆಯಾ ಮಿಡತೆ ಹಾವಳಿ…..ಕರಾವಳಿಗೂ ತಟ್ಟಿದೆಯಾ ಮಿಡತೆ ಹಾವಳಿ……!!
ಬೆಳ್ತಂಗಡಿ:ಲಾಕ್ ಡೌನ್ ನಡುವೆ ಉತ್ತರ ಭಾರತದಲ್ಲಿ ಭಾರಿ ಹಾವಳಿ ಸೃಷ್ಠಿಸಿರುವ ಭಕಾಸುರ ಮಿಡತೆ ಈ ಕರಾವಳಿಗೂ ಕಾಲಿಟ್ಟಿದೆಯಾ ಎಂಬ ಭಯ ಮೂಡಲಾರಂಭಿಸಿದ್ದು, ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಕಡಬ ತಾಲೂಕಿನ ಕೆಲವೆಡೆ ಮಿಡತೆ ಹಾವಳಿ ಕಂಡು ಬಂದಿದ್ದು, ಕರಾವಳಿಯ ಜನರಲ್ಲಿ ಇದೀಗ ಆತಂಕ ಮನೆ ಮಾಡಿದೆ.
ಆಂಫಾನ್ ಚಂಡಮಾರುತದ ಪರಿಣಾಮ ಗಾಳಿಯ ದಿಕ್ಕು ಬದಲಾದ ಹಿನ್ನೆಲೆ ಪಾಕಿಸ್ತಾನಕ್ಕೆ ಹತ್ತಿರ ಇರುವ ಗುಜರಾತ್, ರಾಜಸ್ತಾನ, ಪಂಬಾಜ್ ಮತ್ತು ಮಧ್ಯಪ್ರದೇಶಗಳ ಮೇಲೆ ಮಿಡತೆಗಳು ದಾಳಿ ಮಾಡಿವೆ ಈಗಾಗಲೇ ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಭಾರೀ ಪ್ರಮಾಣದ ಬೆಳೆ ನಾಶ ಮಾಡಿರುವ ಮಿಡತೆ ಸೈನ್ಯ ಮಹಾರಾಷ್ಟ್ರ ಮೂಲಕ ಕರ್ನಾಟಕಕ್ಕೂ ಪ್ರವೇಶ ಪಡೆಯಲಿದೆ ಎಂದು ಹೇಳಲಾಗಿದೆ. ಈಗಾಗಲೇ ರಾಜ್ಯ ಸರಕಾರ ಮಿಡತೆ ಹಾವಳಿ ತಡೆಯಲು ಕ್ರಮಕೈಗೊಳ್ಳಲು ಸಭೆ ನಡೆಸಿದೆ.
ಆದರೆ ಈಗ ಕರಾವಳಿಯ ಕೆಲವು ತಾಲೂಕುಗಳಲ್ಲಿ ಮಿಡತೆ ಸೈನ್ಯ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೆ ಅನೀಶ್ ಎಂಬವರ ತೋಟದಲ್ಲಿ ಇಂದು ಮಧ್ಯಾಹ್ನ ಮಿಡತೆಗಳ ಗುಂಪು ಕಂಡುಬಂದಿದೆ. ಅನೀಶ್ ಅವರು ಇಂದು ಮಧ್ಯಾಹ್ನ ತನ್ನ ರಬ್ಬರ್ ತೊಟದಲ್ಲಿ ಹೋಗಿ ನೋಡಿದಾಗ ಮಿಡತೆಗಳು ರಬ್ಬರ್ ಗಿಡಗಳ ಕೆಳಗೆ ಇರುವ ಗಿಡ ಬಳ್ಳಿಗಳ ಸೊಪ್ಪುಗಳನ್ನು ತಿನ್ನುವುದನ್ನು ಗಮನಿಸಿದಾಗ ಮಿಡತೆಗಳ ಹಿಂಡು ಕಂಡುಬಂದಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಿಡತೆ ಹಾವಳಿ ಬಗ್ಗೆ ಮಾಹಿತಿ ಬಂದಿದೆ. ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜಿಲಾಡಿಯ ವಿಶ್ವನಾಥ ಏರಾ ಎಂಬವರ ತೋಟದಲ್ಲಿ ಮಿಡತೆಗಳ ಗುಂಪು ಕಂಡುಬಂದಿದೆ. ಗುಂಪು, ಗುಂಪಾಗಿ ಆಗಮಿಸುವ ಮಿಡತೆಗಳು ಮರದ ಎಲೆಗಳನ್ನು ತಿನ್ನುತ್ತಿವೆ. ಸಾಮಾನ್ಯವಾಗಿ ಸಾಯಂಕಾಲ ಸಮಯದಲ್ಲಿ ಈ ಮಿಡತೆಗಳ ಗುಂಪು ಕಾಣಸಿಗುತ್ತಿದೆ. ಈಗಾಗಲೇ ಎಲ್ಲಾ ಕಡೆಯಲ್ಲೂ ಮಿಡತೆಗಳ ಹಾವಳಿಯಿಂದ ತತ್ತರಿಸುತ್ತಿರುವಾಗ ತಾಲೂಕಿನಲ್ಲಿಯೂ ಮಿಡತೆಗಳು ಕಂಡು ಬಂದಿದ್ದು ಕೃಷಿಕರು ಚಿಂತೆಗೀಡಾಗುವಂತೆ ಮಾಡಿದೆ.