LATEST NEWS
ಲಾಕ್ ಡೌನ್ ತಂದ ಆರ್ಥಿಕ ಸಂಕಷ್ಟ: ಆಟೋ ಚಾಲಕ ಆತ್ಮಹತ್ಯೆ

ಉಡುಪಿ, ಮೇ 10 : ಮನನೊಂದ ಆಟೋ ಚಾಲಕರೊಬ್ಬರು ಮನೆಯ ಮಾಡಿನ ಜಂತಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಉಡುಪಿಯ 76 ಬಡಗುಬೆಟ್ಟುವಿನ ಬೈಲೂರಿನಲ್ಲಿ ಇಂದು ನಡೆದಿದೆ.
ಮೃತ ವ್ಯಕ್ತಿ ಯತಿರಾಜ್ (40 ) ಉಡುಪಿಯ ಮೀನು ಮಾರುಕಟ್ಟೆ ಬಳಿಯ ಆಟೋ ಸ್ಟ್ಯಾಂಡಿನ ಚಾಲಕ ಎಂದು ತಿಳಿದು ಬಂದಿದೆ. ಲಾಕ್ ಡೌನ್ ತುರ್ತು ಪರಿಸ್ಥಿತಿಯಲ್ಲಿ ದುಡಿಮೆ ಇಲ್ಲದೆ, ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಕಾರಣ ಮನನೊಂದು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತರ
ಶವವನ್ನು ಮರಣೋತ್ತರ ಪರೀಕ್ಷೆಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಉಚಿತ ಅಂಬುಲೆನ್ಸ್ ಸೇವೆಯನ್ನು ಒದಗಿಸಿ ಇಲಾಖೆಗೆ ಸಹಕರಿಸಿದರು.