Connect with us

    DAKSHINA KANNADA

    ಮಂಗಳೂರಿನ ಬೈಕ್ ಸವಾರರಿಗೆ ಪಟ್ಲಬೆಟ್ಟದಲ್ಲಿ ಸ್ಥಳೀಯರಿಂದ ಹಲ್ಲೆ; ವಿಡಿಯೋ ವೈರಲ್

    ಸುಬ್ರಹ್ಮಣ್ಯ, ಜೂನ್ 24: ಸುಬ್ರಹ್ಮಣ್ಯದ ಬಿಸ್ಲೇ ಘಾಟ್ ಸಮೀಪದ ಸಕಲೇಶಪುರ ತಾಲೂಕು ವ್ಯಾಪ್ತಿಯ ಪ್ರವಾಸಿ ತಾಣ ಪಟ್ಲಬೆಟ್ಟಕ್ಕೆ ತೆರಳಿದ್ದ ಮಂಗಳೂರಿನ ತಂಡದ ಮೇಲೆ ಅಲ್ಲಿನ ವ್ಯಕ್ತಿಗಳು ಹಲ್ಲೆ ನಡೆಸಿದ ಆರೋಪ ವ್ಯಕ್ತವಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


    ಹಲ್ಲೆಗೊಳಗಾದವರಲ್ಲಿ ಮಂಗಳೂರಿನ ಕೊಟ್ಟಾರದ ಯುವಕ ಈ ಬಗ್ಗೆ ಸಕಲೇಶಪುರ ತಾಲೂಕಿನ ಯಸಲೂರು ಠಾಣೆಗೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಯಾವ ಕಾರಣಕ್ಕೆ ನಡೆದಿದೆ ಎಂದು ನಿಖರ ಕಾರಣ ತಿಳಿದುಬಂದಿಲ್ಲ. ಬೈಕ್ ನಲ್ಲಿ ಬಂದಿರುವ ತಂಡದ ಜೊತೆ ಅಲ್ಲಿದ್ದ ವ್ಯಕ್ತಿಗಳು ಬೈಕ್ ನಲ್ಲಿ ಹೋಗಬೇಡಿ ಎಂಬಿತ್ಯಾದಿ ಮಾತನಾಡಿ ವಾಗ್ವಾದ ನಡೆಸಿ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿದೆ.

    ಜೂನ್ 23 ರಂದು ಈ ಘಟನೆ ನಡೆದಿದ್ದು, ಭುವಿತ್ ಪೂಜಾರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸೋಮವಾರ ಚಾಲಕರಾದ ಗಗನ್, ಕಿರಣ್, ನಿಶಾಂತ್, ಮದನ್ ಎಂಬುವವರ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಪ್ರವಾಸಿಗರ ಪ್ರಕಾರ ಜೀಪ್‌ನ ಚಾಲಕರು ಸಂಘವನ್ನು ಮಾಡಿಕೊಂಡಿದ್ದು, ಹಿಲ್ ಟಾಪ್‌ಗಾಗಿ ಖಾಸಗಿ ವಾಹನಗಳು ಅಥವಾ ದ್ವಿಚಕ್ರ ವಾಹನಗಳಿಗೆ ಅನುಮತಿ ನೀಡುವುದಿಲ್ಲ. ಪ್ರವಾಸಿಗರು ಬೆಟ್ಟದ ಮೇಲಕ್ಕೆ ಹೋಗಲು ಸ್ಥಳೀಯವಾಗಿ ಲಭ್ಯವಿರುವ ಫೋರ್-ವೀಲ್ ಡ್ರೈವ್ ಜೀಪ್‌ಗಳನ್ನು ಬಳಸಬೇಕು. ಆದರೆ ಅವರು ಅತಿಯಾದ ಶುಲ್ಕವನ್ನು ವಿಧಿಸುತ್ತಾರೆ ಎಂದು ಆರೋಪಿಸಿದ್ದಾರೆ. ಪಟ್ಲ ಬೆಟ್ಟ ಇರುವ ವನಗೂರು ಗ್ರಾಮ ಪಂಚಾಯಿತಿಯ ಅಧಿಕಾರಿಗಳು, ಪ್ರತಿನಿತ್ಯ ಭೇಟಿ ನೀಡುವ ಪ್ರವಾಸಿಗರಿಗೆ ಕಿರುಕುಳ ಮತ್ತು ದುಬಾರಿ ಶುಲ್ಕಕ್ಕೆ ಬೇಡಿಕೆಯಿಟ್ಟರೂ ಕಣ್ಣು ಮುಚ್ಚಿ ಕುಳಿತಿದ್ದಾರೆ. ಪ್ರವಾಸಿಗರು ಮತ್ತು ಸ್ಥಳೀಯ ಜನರು ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಪ್ರವಾಸಿಗರಿಗೆ ಭದ್ರತೆಯನ್ನು ಒದಗಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದರು.

    ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಬೆಟ್ಟಕ್ಕೆ ಪ್ರತಿ ಟ್ರಿಪ್‌ಗೆ ಚಾಲಕರು 1000 ರಿಂದ 1500 ರೂ. ಕೇಳುತ್ತಾರೆ. ಅನೇಕ ಸಂದರ್ಭಗಳಲ್ಲಿ ತಮ್ಮ ಸ್ವಂತ ವಾಹನಗಳನ್ನು ಬೆಟ್ಟದ ಮೇಲೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದಾಗ ಚಾಲಕರ ಗುಂಪು ಪ್ರವಾಸಿಗರಿಗೆ ಬೆದರಿಕೆ ಹಾಕುತ್ತದೆ ಮತ್ತು ಹಲ್ಲೆ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.

    Share Information
    Advertisement
    Click to comment

    You must be logged in to post a comment Login

    Leave a Reply