Connect with us

    LATEST NEWS

    ಪ್ರಧಾನಿ ಮೋದಿ ಭೇಟಿ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಗುಂಡು ಪತ್ತೆ

    ಪ್ರಧಾನಿ ಮೋದಿ ಭೇಟಿ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಗುಂಡು ಪತ್ತೆ

    ಮಂಗಳೂರು ಮೇ 5: ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಚುನಾವಣಾ ಪ್ರಚಾರ ಮುಗಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಾಪಾಸ್ ಹೊರಡುವ ವೇಳೆ ಸಜೀವ ಗುಂಡುಗಳು ಪತ್ತೆಯಾದ ಘಟನೆ ನಡೆದಿದೆ.

    ಭದ್ರತಾ ಸಿಬ್ಬಂದಿಗಳು ತೀವ್ರ ತಪಾಸಣೆ ನಡೆಸುವ ವೇಳೆ ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದ 65 ವರ್ಷ ಪ್ರಾಯದ ವ್ಯಕ್ತಿಯ ಬ್ಯಾಗ್‌ನಲ್ಲಿ ಈ ಸಜೀವ ಗಂಡುಗಳ ಪತ್ತೆಯಾಗಿವೆ.  ಪ್ರಧಾನಿ ನರೇಂದ್ರ ಮೋದಿ ಹೋರಡುವ ವೇಳೆ ಈ ಬುಲೆಟ್ ಗಳು ಪತ್ತೆಯಾದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

    ವ್ಯಕ್ತಿಯನ್ನು ತೀವ್ರ ವಿಚಾರಣೆ ಒಳಪಡಿಸಿದಾಗ ವ್ಯಕ್ತಿಯ ಬಳಿ ಪರವಾನಿಗೆ ಹೊಂದಿದ ಶಸ್ತ್ರ ಹೊಂದಿರುವ ವಿಚಾರ ತಿಳಿದು ಬಂದಿದ್ದು, ಚುನಾವಣೆ ಹಿನ್ನಲೆಯಲ್ಲಿ ಅದನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಬ್ಯಾಗ್‌ನಲ್ಲಿ ಬುಲೆಟ್‌ ಗಳನ್ನಿಟ್ಟಿರೋ ವಿಚಾರ ಆ ವ್ಯಕ್ತಿ ಮರೆತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply