LATEST NEWS
ಸುಳ್ಳು ಸುದ್ದಿಗಳನ್ನು ಹರಡುವ 9 ಯುಟ್ಯೂಬ್ ಚಾನಲ್‌ಗಳ ಪಟ್ಟಿ ಬಿಡುಗಡೆ

ಬೆಂಗಳೂರು, ಡಿಸೆಂಬರ್ 03: ಪ್ರೆಸ್ ಇನ್‌ಫಾರ್ಮೆಶನ್ ಬ್ಯುರೊದ (PIB) ಫ್ಯಾಕ್ಟ್ ಚೆಕ್ ವಿಭಾಗ, ಸುಳ್ಳು ಸುದ್ದಿಗಳನ್ನು ಹರಡುವ 9 ಯುಟ್ಯೂಬ್ ಚಾನಲ್‌ಗಳ ಹೆಸರುಗಳನ್ನು ಬಿಡುಗಡೆ ಮಾಡಿದೆ.
ಈ ಕುರಿತು ಪಿಐಬಿ ಫ್ಯಾಕ್ಟ್ ಚೆಕ್ ವಿಭಾಗ x ತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಆ ಪ್ರಕಾರ Sarkari Yojana Official, Sansani Live, Bajrang Education, Aapke Guruji, BJ News, Ab Bolega Bharat, GVT News, Daily Study, Bharat Ekta News ಎಂಬ 9 ಯುಟ್ಯೂಬ್ ಚಾನಲ್‌ಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ದೂರಿದೆ.

'Sarkari Yojna Official' नामक एक #YouTube चैनल पर केंद्र सरकार की योजनाओं से संबंधित फ़र्ज़ी खबरें फैलाई जा रही हैं।
इस चैनल के 1 लाख सब्सक्राइबर और 29 लाख से अधिक व्यूज हैं।#PIBFactCheck
अधिक जानने के लिए देखें यह थ्रेड 👇 pic.twitter.com/6444UkZdra
— PIB Fact Check (@PIBFactCheck) December 1, 2023
ಈ ಎಲ್ಲ 9 ಯುಟ್ಯೂಬ್ ಚಾನಲ್‌ಗಳು 83 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದವು ಎಂದು ತಿಳಿಸಿದೆ. ಈ ವರದಿ ಆಧರಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಚಾನಲ್‌ಗಳನ್ನು ಸ್ಥಗಿತಗೊಳಿಸಬಹುದು.