LATEST NEWS
ಗ್ರೀನ್ ಝೋನ್ ಗಳಲ್ಲಿ ಮದ್ಯಮಾರಾಟಕ್ಕೆ ಅನುಮತಿ..!!
ಗ್ರೀನ್ ಝೋನ್ ಗಳಲ್ಲಿ ಮದ್ಯಮಾರಾಟಕ್ಕೆ ಅನುಮತಿ..!!
ನವದೆಹಲಿ ಮೇ.1: ಕೊರೊನಾದ ಲಾಕ್ ಡೌನ್ ನಿಂದಾಗಿ ಕಂಗೆಟ್ಟಿದ್ದ ಮದ್ಯಪ್ರಿಯರಿಗೆ ಕೇಂದ್ರ ಸರಕಾರ ಒಂದು ಗುಡ್ ನ್ಯೂಸ್ ನೀಡಿದ್ದು, ಕೊರೊನಾ ಗ್ರೀನ್ ಝೋನ್ ನಲ್ಲಿರುವವರಿಗೆ ಮೇ 4 ರಿಂದ ಮದ್ಯ ಪೂರೈಕೆ ಆಗಲಿದೆ.
ಕೇಂದ್ರ ಸರ್ಕಾರ ಇಂದು ಮತ್ತೆ ಮೂರು ವಾರಗಳ ಕಾಲ ಲಾಕ್‍ಡೌನ್ ವಿಸ್ತರಿಸಿದ್ದು, ಮೇ 17ರವರೆಗೆ ಲಾಕ್‍ಡೌನ್ ಮುಂದುವರಿಯಲಿದೆ. ಈ ಅವಧಿಯಲ್ಲಿ ಹಸಿರು ವಲಯದ ಜಿಲ್ಲೆಗಳಲ್ಲಿ ಮದ್ಯ ಮಾರಾಟದ ಜೊತೆ ಪಾನ್ ಅಂಗಡಿ ತೆರೆಯಲು ಅನುಮತಿ ನೀಡಿದೆ. ಆದರೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದರೂ ಕೆಲವು ಷರತ್ತುಗಳನ್ನು ವಿಧಿಸಿದೆ.
ಮದ್ಯದಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು ಬಾರಿ 5 ಜನ ಅಂಗಡಿಯ ಮುಂದೆ ನಿಲ್ಲಬಹುದು. ವ್ಯಕ್ತಿಗಳು ಕನಿಷ್ಟ 6 ಅಡಿ ಅಂತರದಲ್ಲಿ ನಿಲ್ಲಬೇಕು ಎಂದು ಷರತ್ತು ವಿಧಿಸಿದೆ. ಹಸಿರು ವಲಯಲ್ಲಿ ಮಾತ್ರ ಅನುಮತಿ ನೀಡಿದ್ದು, ಕೆಂಪು ವಲಯ ಮತ್ತು ಕಿತ್ತಾಳೆ ವಲಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿಲ್ಲ.