Connect with us

LATEST NEWS

ಲಿಂಗಾಯುತ ಧರ್ಮದ ವಿಚಾರದಲ್ಲಿ ಯಾವುದೇ ಚರ್ಚೆಗೂ ಸಿದ್ಧ- ಪೇಜಾವರ ಶ್ರೀ

ಲಿಂಗಾಯುತ ಧರ್ಮದ ವಿಚಾರದಲ್ಲಿ ಯಾವುದೇ ಚರ್ಚೆಗೂ ಸಿದ್ಧ- ಪೇಜಾವರ ಶ್ರೀ

ಉಡುಪಿ,ಅಕ್ಟೋಬರ್ 21 : ಲಿಂಗಾಯತರು ಹಿಂದೂ ಧರ್ಮ ತೊರೆಯಬೇಡಿ ಎಂದು ಹೇಳಿದ್ದೇನೆ ಆದರೆ ಈ ಹೇಳಿಕೆ ನಾನು ಭಯದಿಂದ ಹೇಳಿದ ಹೇಳಿಕೆ ಅಲ್ಲ ಎಂದು ಉಡುಪಿ ಪರ್ಯಾಯ ಮಠಾಧೀಶರಾದ ಶ್ರೀ ಪೇಜಾವರ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರಿಗೆ ಹೇಳಿಕೆ ನೀಡಿದ ಪರ್ಯಾಯ ಶ್ರೀ ಗಳು ಲಿಂಗಾಯತರ ಮೇಲೆ ಯಾವ ವಿರೋಧವೂ ಇಲ್ಲ.

ಲಿಂಗಾಯತರು ನಮ್ಮವರು ಎಂಬೂದಷ್ಟೇ ನನ್ನ ಕಾಳಜಿ ಮತ್ತು ಇದು ಸಲಹೆ- ಒತ್ತಡ ಅಲ್ಲ, ಇದು ಕೇವಲ ನಿವೇದನೆಯಷ್ಟೇ ಎಂದು ಹೇಳಿದರು.

 

ನಾವು ಇಷ್ಟರವರೆಗೆ ಹಿಂದೂಗಳಾಗಿಯೇ ಇರಲಿಲ್ಲ ಅಂತ ಡಾ.ಶಿವಾನಂದ ಜಾಮ್ದಾರ್  ಹೇಳುತ್ತಾರೆ. ಜಾಮ್ದಾರ್ ಅವರ ಹೇಳಿಕೆ ಸರಿಯಲ್ಲ ಎಂದ ಅವರು ಜಾಮ್ದಾರರು ಹೇಳಿದ್ದೇಲ್ಲ ಸತ್ಯಕ್ಕೆ ವಿರುದ್ಧವಾದ ವಿಚಾರವಾಗಿದೆ.

ಲಿಂಗಾಯಿತರ ಮೇಲೆ ಪ್ರೀತಿಯಿಂದ ಇಷ್ಟೆಲ್ಲಾ ಹೇಳುತ್ತಿದ್ದೇನೆ ಯಾಕೆಂದರೆ ಹಿಂದೂ ಧರ್ಮ ದುರ್ಬಲವಾಗಬಾರದು ಎಂಬುದಷ್ಟೇ ನನ್ನ ಕಳಕಳಿ ಎಂದರು.

ಕರ್ನಾಟಕದಲ್ಲಿ ಹಿಂದೂ ಧರ್ಮವನ್ನು ತಾನು ಉತ್ತಮ ರೀತಿಯಲ್ಲಿ ಬೆಂಬಲಿಸಿಕೊಂಡು ಬಂದಿದ್ದಾನೆ. ಇದರಲ್ಲಿ ಯಾವುದೇ ವೈಯಕ್ತಿಕ ಸ್ವಾರ್ಥ ಇಲ್ಲ. ನಾನೇನು ಚುನಾವಣೆಗೆ ನಿಲ್ಲುವುದಿಲ್ಲ.

ಈ ಬಗ್ಗೆ ಉಡುಪಿಯಲ್ಲಿ ಚರ್ಚೆಯಾಗಲಿ. ಅಥವಾ ನನ್ನ ಪರ್ಯಾಯ ಅವಧಿ ಮುಗಿದ ಜನವರಿ 18 ರ ನಂತರ ಬೆಂಗಳೂರಿನಲ್ಲಿ ಚರ್ಚೆಯಾಗಲಿ. ನಾನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಗೆ ಬರಲು ಸಿದ್ಧ ಎಂದರು.
1968 ರಲ್ಲಿ ಉಡುಪಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಸಮಾವೇಶ ನಡೆದಿತ್ತು. ಆ ಸಮಾವೇಶದಲ್ಲಿ ಆಗಿನ ಸುತ್ತೂರು ಸಿದ್ದಗಂಗಾಶ್ರೀಗಳು ಭಾಗವಹಿಸಿದ್ದರು. ಲಿಂಗಾಯತರು, ವಿರಕ್ತಿ ಮಠಾಧೀಶರೂ ಪಾಲ್ಗೊಂಡಿದ್ದಾರೆ.

ಆದ್ದರಿಂದ ಜಾಮ್ದಾರ್ ಹೇಳಿಕೆಯಲ್ಲಿ ಸತ್ಯ ಇಲ್ಲ. ಹಿಂದೂ ಹೋರಾಟದಲ್ಲಿ ನಿಮ್ಮದು ಪ್ರಥಮ ಧ್ವನಿ ಅಂತ ಈವರೆಗೆ ಎಲ್ಲಾ ಮಠಾಧೀಶರು ಹೇಳಿದ್ದಾರೆ. ಈಗ ಮಾತ್ರ ಹೊಸದಾಗಿ ವಿವಾದ ಪ್ರಾರಂಭವಾಗಿದೆ.

ಬೌದ್ಧ- ಜೈನ ಧರ್ಮ ಪ್ರತ್ಯೇಕವಾದ ಕಾಲದಲ್ಲಿ ನಾನು ಇರಲಿಲ್ಲ. ಬಸವಣ್ಣ ಕೂಡಾ ಶಿವನೇ ಸರ್ವೋತ್ತಮ ಅಂತ ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ಹಲವು ಪಂಥಗಳಿಗೆ ತತ್ವ, ಆಚರಣೆ ವಿಭಿನ್ನವಾದ್ರೂ ಹಿಂದೂ ಧರ್ಮದೊಳಗೆ ಎಲ್ಲರೂ ಇದ್ದಾರೆ.

ಬಸವಣ್ಣ ಪುನರ್ಜನ್ಮವನ್ನು ಒಪ್ಪಿದ್ದಾರೆ. ಅಪರಾಧ ಮಾಡಿದರೆ ನಾಯಿ- ಹಂದಿಯಾಗಿ ಹುಟ್ಟುತ್ತಾರೆಂದು ಶರಣರ ವಚನದಲ್ಲಿದೆ. ಶಿವ ಸರ್ವೋತ್ತಮ ಎನ್ನಲು ಬಸವಣ್ಣ ಆಗಮವನ್ನು ಉಲ್ಲೇಖಿಸಿದ್ದಾರೆ ಮತ್ತು ಉದಾಹರಿಸಿದ್ದಾರೆ.

ಸುಮ್ಮನೆ ಏನೋ ಹೇಳಿದಲ್ಲ ಎಂದ ಪೇಜಾವರ ಶ್ರೀ ಗಳು ನಮ್ಮ ಶಿವ ಅವೈದಿಕ ಅನ್ನಲು ಆಧಾರವೇನು? ಎಂದು ಪ್ರಶ್ನಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *