Connect with us

DAKSHINA KANNADA

ಉಳ್ಳಾಲ : ಗ್ರಾ.ಪಂ. ಸದಸ್ಯನಿಂದ‌ ಮಾಜಿ ಸದಸ್ಯೆಗೆ ಜೀವ ಬೆದರಿಕೆ!

ಉಳ್ಳಾಲ, ಜನವರಿ 10‌: ನರಿಂಗಾನ ಗ್ರಾಮ‌ ಪಂಚಾಯತ್ ನ ಹಾಲಿ‌ ಸದಸ್ಯರೋರ್ವರು ಮಾಜಿ ಸದಸ್ಯೆಗೆ ಜಾತಿ‌ ನಿಂದನೆಗೈದು ಜೀವ ಬೆದರಿಕೆ ಹಾಕಿರುವ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪಂಚಾಯತ್ ನ ಹಾಲಿ ಸದಸ್ಯ ಮುರಳೀಧರ ಆರೋಪಿಯಾಗಿದ್ದು ಮಾಜಿ ಸದಸ್ಯೆ ಬೇಬಿ ದೂರುದಾರರು. ತಮ್ಮ ವಾರ್ಡ್ ನಲ್ಲಿ ಮೀಸಲಿಟ್ಟಿರುವ ಅನುದಾನವನ್ನು ಬೇರೆ ಕೆಲಸಕ್ಕೆ ಬಳಸದಂತೆ ಬೇಬಿ ಪಂಚಾಯತ್ ನ ಅಧಿಕಾರಿಗಳಿಗೆ ಮನವಿ‌ ಮಾಡಿದ್ದಾರೆ ಎನ್ನಲಾಗಿದೆ. ‌ಇದರಿಂದ ಅಸಮಾಧಾನಗೊಂಡ ಆರೋಪಿ, ಬೇಬಿ ಅವರಿಗೆ ಜಾತಿ ನಿಂದನೆಗೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *