Connect with us

    UDUPI

    ಚಿರತೆ ಪತ್ತೆ, ಅರಣ್ಯಾಧಿಕಾರಿಗಳಿಂದ ರಕ್ಷಣೆ

    ಉಡುಪಿ,ಸೆಪ್ಟೆಂಬರ್ 03: ಮೂರು ವರ್ಷ ಚಿರತೆಯೊಂದನ್ನು ಉಡುಪಿ ಅರಣ್ಯ ಇಲಾಖಾಧಿಕಾರಿಗಳು ರಕ್ಷಿಸಿದ್ದಾರೆ. ಉಡುಪಿಯ ಕೊಕ್ಕರ್ಣೆ ಸಮೀಪ ನೀರ್ಜಡ್ಡಿಯಲ್ಲಿ ಈ ಹೆಣ್ಣು ಚಿರತೆಯನ್ನು ರಕ್ಷಿಸಿದ್ದಾರೆ.ಈ ಚಿರತೆ  ಕಳೆದ ಕೆಲ ಸಮಯದಿಂದ  ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದು ,ನಿದ್ದೆಗೆಡಿಸಿತ್ತು. ರಾತ್ರಿಯಾಗುತ್ತಿದ್ದಂತೆ ಗ್ರಾಮಕ್ಕೆ ನುಗ್ಗಿ ನಾಯಿಗಳ ಬೇಟೆಯಾಡುತ್ತಿದ್ದು, ಹೀಗೆ ನಾಯಿಯೊಂದನ್ನು ಅ್ಟಟ್ಟಿಸಿಕೊಂಡು ಬಂದು ಉರುಳು ತಂತಿಗೆ ಸಿಕ್ಕಿಹಾಕಿಕೊಂಡಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿಮುಟ್ಟಿಸಿದ್ದಾರೆ. ಅರಣ್ಯಾಧಿಕಾರಿಗಳು ತಜ್ಞ ವೈದ್ಯರುಗಳೊಂದಿಗೆ ಸ್ಥಳಕ್ಕೆ ತೆರಳಿ ಅರವಳಿಕೆ ಮದ್ದನ್ನು ನೀಡಿ, ಚಿರತೆಯನ್ನು ಬೋನಿಗೆ ವರ್ಗಾಯಿಸಿ ದೂರದ ರಕ್ಷಿತಾರಣ್ಯದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.

     

     

    Share Information
    Advertisement
    Click to comment

    Leave a Reply

    Your email address will not be published. Required fields are marked *