Connect with us

LATEST NEWS

ಮುಂಜಾನೆ ಮನೆಗೆ ಎಂಟ್ರಿ ಕೊಟ್ಟ ಅತಿಥಿ…ಕೋಣೆಯೊಳಗೆ ಬಂಧಿ

ಉಡುಪಿ ಮಾರ್ಚ್ 21: ಮನೆಯವರು ಮುಂಜಾನೆ ನಿದ್ರೆ ಮಂಪರಿನಲ್ಲಿರುವಾಗಲೇ ಚಿರತೆಯೊಂದು ಮನೆಯ ಕೋಣೆಯೊಳಗೆ ನುಗ್ಗಿ ಬಂಧಿಯಾದ ಘಟನೆ ಬ್ರಹ್ಮಾವರದ ನೆಲ್ಯಾಡಿ ಎಂಬಲ್ಲಿ ನಡೆದಿದೆ.

ಬ್ರಹ್ಮಾವರದ ನೈಲಾಡಿ ಗ್ರಾಮದ ಅಗ್ನೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಿಗ್ಗೆ 4.30 ಸುಮಾರಿಗೆ ಆಹಾರ ಹುಡುಕುತ್ತಾ ಬಂದಿದ್ದ ಚಿರತೆ ಸಾಕು ನಾಯಿ ನೋಡಿ ಬೆನ್ನಟ್ಟಿದೆ. ಚಿರತೆ ನೋಡಿ ಹೆದರಿದ ನಾಯಿ ಸೀದಾ ಮನೆಯ ಪಕ್ಕದಲ್ಲಿದ್ದ ಗೋಡೌನ್ ಗೆ ನುಗ್ಗಿದೆ. ನಾಯಿ ಜೊತೆ ಚಿರತೆಯೂ ಗೋಡೌನ್ ಗೆ ನುಗ್ಗಿದ, ಶಬ್ದಕೇಳಿದ ಹಿನ್ನಲೆ ಮನೆಯವರು ಬಂದು ನೋಡಿದಾಗ ಚಿರತೆ ಎಂದು ಗೊತ್ತಾಗಿ, ಗೋಡೌನ್ ಬಾಗಿಲು ಹಾಕಿದ್ದಾರೆ. ನಾಯಿ ಹಿಡಿಯಲು ಬಂದು ಆತುರದಲ್ಲಿ ಚಿರತೆ ತಾನೇ ಸಿಕ್ಕಿ ಹಾಕಿಕೊಂಡಿತು.

ಸ್ಥಳಕ್ಕೆ ಶಂಕರನಾರಾಯಣ ವಲಯದ ಶಿಬ್ಬಂದಿಗಳು ಆಗಮಿಸಿ ಚಿರತೆಯನ್ನು ಬೋನಿನೊಳಗೆ ಕಳುಹಿಸಿ ರಕ್ಷಣೆ ಮಾಡಿದ್ದಾರೆ. ಈ ಹಿಂದೆಯೂ ಇದೇ ಪ್ರದೇಶದಲ್ಲಿ ಹಲವರಿಗೆ ಈ ಚಿರತೆ ಕಾಣಸಿಕ್ಕಿತು ಎಂದು ಸ್ಥಳೀಯರು ತಿಳಿಸಿದ್ದು, ಇಲಾಖೆಯ ಕಾರ್ಯಾಚರಣೆಯಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.