ಪುತ್ತೂರು,ಸೆಪ್ಟಂಬರ್ 6: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬ ಸಮೀಪದ ಮುಂಡ್ರಾಡಿಯಲ್ಲಿ ಚಿರತೆಯೊಂದು ಉರುಳಿಗೆ ಸಿಕ್ಕಿ ಹಾಕಿಕೊಂಡಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಚಿರತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಡಬ ಸಮೀಪದ ಮುಂಡ್ರಾಡಿಯ ಶ್ರೀನಿವಾಸ್ ರೈ ಎನ್ನುವವರಿಗೆ ಸೇರಿದ ಜಾಗದಲ್ಲಿ ಬೇರೆ ಪ್ರಾಣಿಗಳಿಗಾಗಿ ಉರುಳನ್ನು ಅಳವಡಿಸಲಾಗಿತ್ತು. ಆದರೆ ಆ ಉರುಳಿಗೆ ಚಿರತೆಯೊಂದು ಬಿದ್ದಿದ್ದು, ವಿಷಯ ತಿಳಿದ ಮನೆ ಮಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಚಿರತೆಯನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ.
ಮಂಗಳೂರಿನ ಪಿಲಿಕುಲದಿಂದ ಅರಿವಳಿಕೆ ತಜ್ಞರನ್ನು ಕರೆಸುವ ಮೂಲಕ ಅರಿವಳಿಕೆ ಮದ್ದನ್ನು ಗನ್ ಮೂಲಕ ಚಿರತೆಗೆ ಚುಚ್ಚಲಾಯಿತು. ಬಳಿಕ ಚಿರತೆಯನ್ನು ಉರುಳಿನಿಂದ ರಕ್ಷಿಸಿ ಮಂಗಳೂರಿನ ಪಿಲಿಕುಲ ಪಾರ್ಕ್ ಗೆ ಸಾಗಿಸಲಾಯಿತು.
06
Sep, 2017