Connect with us

DAKSHINA KANNADA

ಖೆಡ್ಡಕ್ಕೆ ಬಿದ್ದ ಚಿರತೆ,ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಖೆಡ್ಡಕ್ಕೆ ಬಿದ್ದ ಚಿರತೆ,ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಮಂಗಳೂರು, ಸೆಪ್ಟೆಂಬರ್ 18 :
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ವ್ಯಾಪ್ತಿಯ ನಿಡ್ಡೋಡಿಯ ಪರಿಸರದಲ್ಲಿ ಕಳೆದ ಕೆಲವು ವಾರಗಳಿಂದ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಕಳೆದ 2 ವಾರಗಳಿಂದ ಗ್ರಾಮಸ್ಥರಿಗೆ ವಿಪರೀತ ಕಾಟ ಕೊಡುತ್ತಿತ್ತು. ಆಗಾಗ ಗ್ರಾಮಕ್ಕೆ ಲಗ್ಗೆ ಇಡುತಿದ್ದ ಕಳ್ಳ ಚಿರತೆ ಮನೆಯ ನಾಯಿಗಳನ್ನು, ಕೋಳಿಗಳನ್ನು ಆಹಾರಕ್ಕಾಗಿ ಬೇಟೆಯಾಡುತ್ತಿತ್ತು.
ಚಿರತೆಯಿಂದ ನೆಮ್ಮದಿ ಕಳಕೊಂಡ ಗ್ರಾಮಸ್ಥರು ಅರಣ್ಯ ಇಲಾಖೆಯ ಮೊರೆ ಹೋಗಿದ್ದರು.ಅರಣ್ಯ ಇಲಾಖೆಯವರು  ಬೋನು ಇಟ್ಟು , ಚಿರತೆಗೆ ಖೆಡ್ಡ ರಚನೆ ಮಾಡಿದ್ದು, ನಿನ್ನೆ ರಾತ್ರಿ ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದೆ.
ಸುಮಾರು 5 ವರ್ಷ ಪ್ರಾಯಾದ ಚಿರತೆ ಇದಾಗಿದ್ದು, ಇನ್ನು ಎರಡರಿಂದ ಮೂರು ಚಿರತೆಗಳು ಈ ಪರಿಸರ ದಲ್ಲಿ ಓಡಾಡುತ್ತಿವೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.

 

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *