DAKSHINA KANNADA
ಕೋಡಿಂಬಾಡಿ ಜನವಸತಿ ಪ್ರದೇಶದಲ್ಲಿ ಚಿರತೆ ತಿರುಗಾಟ

ಪುತ್ತೂರು ಡಿಸೆಂಬರ್ 15: ಜನವಸತಿ ಪ್ರದೇಶದಲ್ಲಿ ಚಿರತೆಯೊಂದು ರಾತ್ರಿ ಸಂದರ್ಭ ಓಡಾಟ ನಡೆಸುತ್ತಿರುವ ಘಟನೆ ಪುತ್ತೂರಿ ಕೋಡಿಂಬಾಡಿ ಎಂಬಲ್ಲಿ ನಡೆದಿದ್ದು, ಚಿರತೆ ಓಡಾಟದ ದೃಶ್ಯ ಪ್ರದೇಶದಲ್ಲಿ ಆಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪುತ್ತೂರಿನ ಕೋಡಿಂಬಾಡಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಜನವಸತಿ ಪ್ರದೇಶದಲ್ಲಿ ರಾತ್ರಿ ಸಂದರ್ಭ ಚಿರತೆಯೊಂದು ಸಂಚಾರ ನಡೆಸುತ್ತಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ರಾತ್ರಿ ಸಮಯದಲ್ಲಿ ಗ್ರಾಮದ ರಸ್ತೆಗಳಲ್ಲಿ ಚಿರತೆ ತಿರುಗಾಟ ನಡೆಸುತ್ತಿದೆ. ಈ ಹಿನ್ನಲೆ ಆತಂಕಗೊಂಡಿರುವ ಗ್ರಾಮಸ್ಥರು ಚಿರತೆಯ ಸೆರೆಗೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
https://youtu.be/MepOF2iwq4A