DAKSHINA KANNADA
ಕಬಕದ ಕುಳ ಪರಿಸರದಲ್ಲಿ ಚಿರತೆ ಓಡಾಟ….?

ಪುತ್ತೂರು ಜುಲೈ 11: ಕಬಕದ ಕುಳ ಎಂಬಲ್ಲಿ ಚಿರತೆಯೊಂದು ಪ್ರತ್ಯಕ್ಷವಾದ ಬಗ್ಗೆ ವರದಿಯಾಗಿದ್ದು, ಪರಿಸರದಲ್ಲಿ ಚಿರತೆಯ ಹೆಜ್ಜೆಗುರುತುಗಳು ಕಾಣ ಸಿಕ್ಕಿವೆ.
ಕಬಕ-ವಿಟ್ಲ ರಸ್ತೆಯ ಅಂಗನವಾಡಿ ಪಕ್ಕದಲ್ಲಿರುವ ಮೂಸಾ ಎನ್ನುವವರ ಮನೆ ಸಮೀಪ ರಾತ್ರಿ ವೇಳೆ ನಾಯಿಗಳ ಬೊಗಳುವ ಸದ್ದು ಕೇಳಿ ಬಂದಿದ್ದು, ಈ ವೇಳೆ ಮೂಸಾ ಅವರು ಮನೆ ಹೊರಗೆ ನೋಡಿದಾಗ ಚಿರತೆ ಓಡುವುದನ್ನು ನೋಡಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಈ ವಿಷಯವನ್ನು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾರೆ.

ಬೆಳಿಗ್ಗೆ ಸದ್ಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕುಳ ಪ್ರದೇಶಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಅಲ್ಲಿನ ಕೆಲ ಮನೆಯವರ ಜಾಗದಲ್ಲಿ ಚಿರತೆಯ ಕಾಲಿನ ಹೆಜ್ಜೆ ಗುರುತು ಕಾಣಿಸಿಕೊಂಡಿದೆ. ಸದ್ಯ ಕುಳ ಸುತ್ತಮುತ್ತಲಿನ ಯಾರೂ ಕೂಡಾ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕುಳ ಕಾಡು ಬಪ್ಪಳಿಗೆ ಪರಿಸರಕ್ಕೆ ಅಂಟಿಕೊಂಡಿದೆ.