DAKSHINA KANNADA
ಪುತ್ತೂರಿನ ಪುರುಷರಕಟ್ಟೆಯಲ್ಲಿ ಆಪರೇಷನ್ ಚಿರತೆ….!!

ಪುತ್ತೂರು ಜನವರಿ 6: ಪುತ್ತೂರಿನ ಪುರುಷರ ಕಟ್ಟೆ ಪರಿಸರದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪುರುಷರಕಟ್ಟೆಯ ನಡುಗುಡ್ಡೆ ಚಂದಪ್ಪ ಪೂಜಾರಿ ಅವರ ಜಾಗದಲ್ಲಿ ಚಿರತೆ ಹಾದುಹೋಗಿದೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನು ಅಳವಡಿಸಿದ್ದು, ಸ್ಥಳದಲ್ಲಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ.
ಸರ್ವೆ ,ಮುಂಡೂರು,ಬನ್ನೂರು,ಪಡೀಲ್,ಕೋಡಿಂಬಾಡಿ ಹಾಗೂ ಕಡಬ ತಾಲೂಕಿನ ಪಾಲ್ತಾಡಿ,ಚೆನ್ನಾವರ,ಬಂಬಿಲ ಸೇರಿದಂತೆ ಕೆಲವು ಕಡೆಗಳಲ್ಲಿ ಚಿರತೆ ಪ್ರತ್ಯಕ್ಷಗೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ನಿನ್ನೆ ನರಿಮೊಗರು ಗ್ರಾ.ಪಂ ವ್ಯಾಪ್ತಿಯ ಮುಕ್ವೆ ಮೊಗೇರಡ್ಕ ಎಂಬಲ್ಲಿ ಬೋನು ಅಳವಡಿಸಿದ್ದಾರೆ.

ಈ ಮೂಲಕ ಚಿರತೆಯನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಮೊಗೇರಡ್ಕ ಎಂಬಲ್ಲಿ ಪೊದೆಗಳು ಹೆಚ್ಚು ಇರುವ ನಿರ್ಜನ ಪ್ರದೇಶದಲ್ಲಿ ಈ ಬೋನು ಅಳವಡಿಸಲಾಗಿದೆ. ಚಿರತೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಆಗಾಗ ವರದಿಯಾಗುತ್ತಿದ್ದು ಜನತೆ ಕೂಡಾ ಭಯಭೀತರಾಗಿದ್ದಾರೆ.