LATEST NEWS
ಎಲ್ ಇಡಿ ಟಿವಿ ಬ್ಲಾಸ್ಟ್ – ಬಾಲಕ ಸಾವು….!!
ಲಕ್ನೋ ಅಕ್ಟೋಬರ್ 06: ಎಲ್ ಇಡಿ ಟಿವಿ ಸ್ಪೋಟಗೊಂಡ ಪರಿಣಾಮ ಬಾಲಕನೊಬ್ಬ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಮೃತ ಬಾಲಕನನ್ನು ಓಮೇಂದ್ರ (16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಎಲ್ ಐಡಿ ಟಿವಿ ಸ್ಪೋಟಗೊಂಡಿದ್ದು, ಓಮೇಂದ್ರನ ಮುಖ, ಎದೆ ಮತ್ತು ಕತ್ತಿನ ಮೇಲೆ ತೀವ್ರವಾಗಿ ಗಾಯವಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿದೇ ಸಾವನ್ನಪ್ಪಿದ್ದಾನೆ.
ಸ್ಪೋಟದ ತೀವೃತೆಗೆ ಮನೆಯ ಗೊಡೆಯ ಒಂದು ಭಾಗವೇ ಕುಸಿದಿದ್ದು, ಮೊದಲು ಮನೆಯವರು ಸಿಲಿಂಡರ್ ಸ್ಪೋಟ ಎಂದು ಭಾವಿಸಿದ್ದರು. ಘಟನೆ ಸಂಭವಿಸಿದಾಗ ಓಮೇಂದ್ರನ ತಾಯಿ, ಅತ್ತಿಗೆ ಹಾಗೂ ಸ್ನೇಹಿತ ಇನ್ನೊಂದು ಕೋಣೆಯಲ್ಲಿದ್ದರು. ಇದರಿಂದಾಗಿ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿದೆ. ಅವರೆಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.