DAKSHINA KANNADA
ಎಲೆ ಚುಕ್ಕೆ ಆತಂಕ ಪಡುವ ರೋಗವಲ್ಲ !- ಸಮಗ್ರ ಕೃಷಿ ಮಾಡಿದರೆ ರೋಗ ನಿವಾರಣೆ ವಿಜ್ಞಾನಿ ಡಾ. ಬಿ.ಕೆ.ವಿಶುಕುಮಾರ್ ಹೇಳಿಕೆ.
ಪುತ್ತೂರು, ಡಿಸೆಂಬರ್ 13: ಎಲೆ ಚುಕ್ಕಿ ರೋಗವು ತೀವ್ರವಾದ ಶಿಲೀಂಧ್ರ ರೋಗವಾಗಿದ್ದು, ಇದು ಅಡಿಕೆ ಎಲೆಗಳ ಮತ್ತು ಅಡಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಹಾಗು ಇಳುವರಿಯನ್ನು ನಷ್ಟ ಮಾಡುತ್ತದೆ. ಆದರೆ ಇದು ಆತಂಕ ಪಡುವ ರೋಗವಲ್ಲ. ಸಮಗ್ರ ಕೃಷಿ ಮಾಡಿದರೆ ರೋಗ ನಿವಾರಣೆ ಮಾಡಬಹುದು ಎಂದು ವಿಜ್ಞಾನಿ ಡಾ.ಬಿ.ಕೆ.ವಿಶುಕುಮಾರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಅಡಿಕೆ ಗಿಡಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಆಗ ರೋಗ ಸಂಪೂರ್ಣ ನಿವಾರಣೆಯಾಗುತ್ತದೆ. ಗೊಬ್ಬರ, ಪೋಷಕಾಂಶಗಳು ಮತ್ತು ನೀರಿನ ವ್ಯವಸ್ಥಿತ ನಿರ್ವಹಣೆ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮದೇ ಉತ್ಪನ್ನ ಮೈಕ್ರೋಪವರ್ ಜೊತೆಗೆ ಸಮಗ್ರ ಪೋಷಕಾಂಶ ಬಳಸುವ ಮೂಲಕ ನಾವು ಪ್ರಮುಖ ರೋಗವನ್ನು ನಿಯಂತ್ರಣಕ್ಕೆ ತಂದಿದ್ದೇವೆ ಎಂದು ಅವರು ಹೇಳಿದರು.
ಎಲೆ ಚುಕ್ಕೆ ರೋಗವನ್ನು ನಿರ್ವಹಿಸಲು ಸೋಂಕಿತ ಎಲೆಗಳನ್ನು ತೆಗೆದು ಹಾಕಿ ತೀವ್ರವಾಗಿ ಸೋಂಕಿತ ಎಲೆಗಳನ್ನು ತೆಗೆದು ಸುಟ್ಟು ಹಾಕಬೇಕು. ಶಿಲೀಂಧ್ರ ನಾಶಕ ಸಿಂಪಡಿಸಬಹುದು. ಬೋರ್ಡೋ ದ್ರಾವಣ ಮತ್ತು ಲಘು ಪೋಷಕಾಂಶ ಸಿಂಪಡಣೆ ಮಾಡಬಹುದು ಎಂದ ಅವರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9886495008 ಅನ್ನು ಸಂಪರ್ಕಿಸುವಂತೆ ಅವರು ವಿನಂತಿಸಿದರು.
ಪತ್ರಿಕಾಗೋಷ್ಟಿಯಲ್ಲಿರೈತ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಪುರುಷೋತ್ತಮ ಕೋಲ್ಪೆ, ಕೃಷಿಕ ಶ್ರೇಯಸ್ ಶೆಟ್ಟಿ ಉಪಸ್ಥಿತರಿದ್ದರು.