FILM
ಮಾಡೆಲ್ ಉರ್ಫಿ ಜಾವೇದ್ ವಿರುದ್ದ ದೂರು….!!
ಮುಂಬೈ ಡಿಸೆಂಬರ್ 12: ಸಾರ್ವಜನಿಕ ಪ್ರದೇಶಗಳಲ್ಲಿ ತಮ್ಮ ಹಾಟ್ ಅವತಾರಗಳಿಂದ ಪೇಮಸ್ ಆಗಿರುವ ಮಾಡೆಲ್ ಉರ್ಫಿ ಜಾವೇದ್ ವಿರುದ್ದ ಇದೀಗ ಮುಂಬೈ ನಲ್ಲಿ ದೂರು ದಾಖಲಾಗಿದೆ.
ಸಾರ್ವಜನಿಕ ಪ್ರದೇಶ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಬಾಹಿರ ಹಾಗೂ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಮುಂಬೈನ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲಿ ಖಾಸಿಫ್ ಖಾನ್ ದೇಶ್ಮುಖ್ ಎನ್ನುವ ವಕೀಲರೊಬ್ಬರು ಉರ್ಫಿ ವಿರುದ್ಧ ಲಿಖಿತ ದೂರು ನೀಡಿದ್ದಾರೆ. ಶುಕ್ರವಾರ ನಮಗೆ ದೂರು ಸಲ್ಲಿಕೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.