MANGALORE
ಕೋರ್ಟ್ ಕಲಾಪ ಬಹಿಷ್ಕರಿಸಿದ ವಕೀಲರು
ಕೋರ್ಟ್ ಕಲಾಪ ಬಹಿಷ್ಕರಿಸಿದ ವಕೀಲರು
ಮಂಗಳೂರು ಅಕ್ಟೋಬರ್ 4: ರಾಜ್ಯ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಜಯಂತ್ ಪಟೇಲ್ ಅವರನ್ನು ಅಲಹಬಾದ್ ಹೈಕೋರ್ಟ್ ಗೆ ವರ್ಗಾವಣೆ ಮಾಡಿದ ಸುಪ್ರೀಂ ಕೋರ್ಟ್ ಕೊಲಿಜಿಯಂ ಕ್ರಮ ಖಂಡಿಸಿ ಮಂಗಳೂರಿನ ವಕೀಲರ ಸಂಘ ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಜಯಂತ್ ಪಟೇಲ್ ನ್ಯಾಯಮೂರ್ತಿಯಾಗಿ 16 ವರ್ಷ ಕಾರ್ಯ ನಿರ್ವಹಿಸಿ ಉತ್ತಮ ನ್ಯಾಯಾಧೀಶರು ಎಂದು ಹೆಸರು ಗಳಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಜಯಂತ್ ಪಟೇಲ್ ರಿಗೆ ಹಿಂಬಡ್ತಿ ನೀಡುವ ಮೂಲಕ ಅನ್ಯಾಯ ಎಸಗಿದೆ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.
ಜಯಂತ್ ಪಟೇಲ್ ರಂತಹ ನ್ಯಾಯಾಧೀಶರ ವಿರುದ್ದ ಯಾವುದೋ ಒಂದು ಶಕ್ತಿ ನ್ಯಾಯಾದಾನಕ್ಕೆ ವಿರುದ್ದವಾಗಿ ಕಾರ್ಯನಿರ್ವಹಿಸುತ್ತಿದ್ದು, ನ್ಯಾಯಮೂರ್ತಿ ಜಯಂತ್ ಪಟೇಲ್ ತಮಗೆ ಆದ ಅನ್ಯಾಯದಿಂದ ಮನನೊಂದು ರಾಜೀನಾಮೆ ನೀಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಮೇಲಿನ ಈ ಕ್ರಮ ಖಂಡನೀಯ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.