LATEST NEWS
ಹೆಬ್ಬಾವಿನ ಗಾತ್ರದ ಕಾಳಿಂಗ ಸರ್ಪ – ಹೆಬ್ರಿಯಲ್ಲಿ ಪತ್ತೆಯಾಯ್ತು 15 ಅಡಿ ಉದ್ದದ 12.5 ಕೆಜಿ ತೂಕದ ಕಾಳಿಂಗ ಸರ್ಪ
ಉಡುಪಿ ಎಪ್ರಿಲ್ 02: ಬರೋಬ್ಬರಿ 15 ಅಡಿ ಉದ್ದದ 12.5 ಕೆಜಿ ತೂಕದ ಕಾಳಿಗ ಸರ್ಪವೊಂದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡಪಾಲ್ ಗ್ರಾಮದಲ್ಲಿ ಸಿಕ್ಕಿದೆ.
ಆಗುಂಬೆಯಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ನಾಡ್ಪಾಲ್ ಗ್ರಾಮದ ಭಾಸ್ಕರ್ ಶೆಟ್ಟಿ ಎಂಬವರಿಂದ ಬಂದ ಮಾಹಿತಿ ಪ್ರಕಾರ ಸ್ಥಳಕ್ಕೆ ಆಗಮಿಸಿದ ಡಾ.ಶಂಕರ್, ಪ್ರಶಾಂತ್ ಅವರ ತಂಡ ಕಾಳಿಂಗ ಸರ್ಪ ಕಂಡು ಬೆರಗಾಗಿದ್ದಾರೆ. ಕಾರಣ ಅಷ್ಟು ದೊಡ್ಡ ಗಾತ್ರದ ಕಾಳಿಂಗ ಸರ್ಪ ಇಡೀ ಭಾರತದಲ್ಲೇ ಸಿಗುವುದು ಅಪರೂಪ.
ಸಾಮಾನ್ಯವಾಗಿ ಕಾಳಿಂಗ ಸರ್ಪಗಳು 3.5 ರಿಂದ 7 ಕಿಲೋಗ್ರಾಂಗಳವರೆಗೆ ತೂಕ ಇರುತ್ತದೆ, ಹೆಣ್ಣು 2 ರಿಂದ 3.5 ಕಿಲೋಗ್ರಾಂಗಳಷ್ಟು ಮತ್ತು ಗಂಡು 3.5 ರಿಂದ 6 ಕಿಲೋಗ್ರಾಂಗಳಷ್ಟು ತೂಕವಿರುತ್ತದೆ ಆದಾಗ್ಯೂ, ನಾಡ್‌ಪಾಲ್ ಗ್ರಾಮದಲ್ಲಿ ರಕ್ಷಿಸಲಾದ ಕಾಳಿಂಗ ಸರ್ಪ ಮಾತ್ರ 12.5 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದೆ. ಇದು ಭಾರತದಲ್ಲಿ ಸಿಕ್ಕ ಅತಿ ಉದ್ದದ ಕಾಳಿಂಗ ಸರ್ಪವಾಗಿದೆ ಎಂದು ಡಾ.ಶಂಕರ್ ಮಾಹಿತಿ ನೀಡಿದ್ದಾರೆ.