LATEST NEWS
ನವಮಂಗಳೂರು ಬಂದರಿಗೆ ಬಂದ ಅತಿದೊಡ್ಡ ಕಂಟೈನರ್ ಹಡಗು…!!
ಮಂಗಳೂರು ಜೂನ್ 16 : ನವಮಂಗಳೂರು ಬಂದರಿಗೆ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಭಾರದ ಬೃಹತ್ ಕಂಟೈನರ್ ಹಡಗು ಆಗಮಿಸಿದೆ. ಕೊಲಂಬೋದಿಂದ ನವಮಂಗಳೂರು ಬಂದರಿಗೆ ಆಗಮಿಸಿರುವ ಎಂ.ವಿ.ಎಸ್‌ಎಸ್‌ಎಲ್ ಬ್ರಹ್ಮಪುತ್ರ ವಿ084 ಎಂಬ ಹೆಸರಿನ ಬೃಹತ್ ಕಂಟೈನರ್ ನೌಕೆ ಇದಾಗಿದ್ದು, ಬಂದರಿನಲ್ಲಿ ಲಂಗರು ಹಾಕಿದ ಮೊದಲ ಬೃಹತ್ ಗಾತ್ರದ ಸರಕು ಸಾಗಣಿ ಹಡಗು ಇದಾಗಿದೆ.
260 ಮೀಟರ್ ಉದ್ದ ಹಾಗೂ 32.35 ಮೀಟರ್ ಬೂಂ, 50,900 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದೆ. 1521 ಟಿಇಯು ಪ್ರಮಾಣದ ಕಂಟೈನರ್‌ಗಳಲ್ಲಿ 25864.40 ಮೆಟ್ರಿಕ್ ಟನ್ ಕಚ್ಚಾ ಗೋಡಂಬಿಯೊಂದಿಗೆ ಆಗಮಿಸಿದ ನೌಕೆ ಮಂಗಳೂರಿನಿಂದ 300 ಟಿಇಯು ಸರಕನ್ನು ಕೊಲಂಬೋಗೆ ಹೊತ್ತೊಯ್ದಿದೆ
ಮೆ.ಶ್ರೇಯಸ್ ಶಿಪಿಂಗ್ ಸಂಸ್ಥೆ ಇದನ್ನು ನಿರ್ವಹಿಸುತ್ತಿದ್ದು, ಮಂಗಳೂರಿನ ಅಮೋಘ ಶಿಪಿಂಗ್ ಸಂಸ್ಥೆ ಸ್ಥಳೀಯವಾಗಿ ಪ್ರತಿನಿಧಿಸುವ ಏಜೆಂಟರಾಗಿದ್ದಾರೆ ಎಂದು ಬಂಧರು ಮಂಡಳಿ ತಿಳಿಸಿದೆ.
ಇನ್ನು ಭಾರಿ ಗಾತ್ರದ ಸರಕು ವ್ಯವಹಾರ ಹಾಗೂ ಬೃಹತ್ ಗಾತ್ರದ ಹಡಗು ಲಂಗರು ಹಾಕಲು ಸಾಧ್ಯವಾಗಿರುವುದಕ್ಕೆ ಎನ್‌ಎಂಪಿಟಿ ಅಧ್ಯಕ್ಷ ಡಾ. ಎ.ವಿ. ರಮಣ ಹರ್ಷ ವ್ಯಕ್ತಪಡಿಸಿದ್ದಾರೆ.