LATEST NEWS
ಕುಲಶೇಖರದಲ್ಲಿ ರೈಲ್ವೆ ಹಳಿ ಮೇಲೆ ಬಿದ್ದ ಮಣ್ಣು ತೆರವು – ರೈಲು ಸಂಚಾರ ಪುನರಾರಂಭ
ಮಂಗಳೂರು, ಜುಲೈ 18: ಮಂಗಳೂರು ಹೊರವಲಯ ಕುಲಶೇಖರ ಸುರಂಗ ಮಾರ್ಗದ ಬಳಿ ರೈಲ್ವೆ ಹಳಿ ಮೇಲೆ ಕುಸಿದಿದ್ದ ತಡೆಗೊಡೆ ಸಹಿತ ಮಣ್ಣನ್ನು ತೆಗೆಯಲಾಗಿದ್ದು, ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರವನ್ನು ಬೆಳಿಗ್ಗೆಯಿಂದ ಪುನರಾರಂಭಿಸಲಾಗಿದೆ.
ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಲಶೇಖರ್–ಪಡೀಲ್ ನಿಲ್ದಾಣಗಳ ಮಧ್ಯೆ ಭೂ ಕುಸಿತ ಉಂಟಾಗಿ ತಡೆಗೋಡೆ ಸಹಿತ ಭಾರೀ ಪ್ರಮಾಣದಲ್ಲಿ ಮಣ್ಣು ರೈಲ್ವೆ ಹಳಿಗಳ ಮೇಲೆ ಬಿದ್ದಿತ್ತು, ಈ ಹಿನ್ನಲೆ ಈ ಮಾರ್ಗದಲ್ಲಿ ಸಂಚರಿಸುವ ಬಹುತೇಕ ರೈಲನ್ನು ರದ್ದುಗೊಳಿಸಲಾಗಿದ್ದು, ಹಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿತ್ತು.
ಹಳಿ ಮೇಲೆ ಬಿದ್ದ ಕಲ್ಲುಮಣ್ಣಿನ ತೆರವು ಕಾರ್ಯಾಚರಣೆ ಶನಿವಾರ ತಡರಾತ್ರಿಯವರೆಗೂ ನಡೆಯಿತು. ತಡೆಗೋಡೆ ಕುಸಿತಗೊಂಡ ಸ್ಥಳದಿಂದ ಮಣ್ಣು, ಬೃಹತ್ ಗಾತ್ರದ ಕಲ್ಲುಗಳನ್ನು ಹಿಟಾಚಿ ಬಳಸಿ ತೆರವುಗೊಳಿಸಲಾಯಿತು. ರೈಲ್ವೆ ಹಳಿಗೆ ವಾಲಿದ ತಡೆಗೋಡೆಯನ್ನು ಯಂತ್ರ ಬಳಸಿ ತುಂಡರಿಸಿ ತೆಗೆಯಲಾಯಿತು
ಇಂದು ಬೆಳಗ್ಗೆ 8:45ರ ವೇಳೆಗೆ ಎರ್ನಾಕುಲಂನಿಂದ ಅಜ್ಮೀರ್‌ಗೆ ಮೊದಲ ರೈಲು ಪ್ರಯಾಣ ಬೆಳೆಸಿತು.