Connect with us

    DAKSHINA KANNADA

    ರೈಲು ಚಲಿಸುತ್ತಿರುವ ಸಂದರ್ಭ ಕುಸಿದ ಧರೆ..ರೈಲಿನ ಗಾರ್ಡ್ ಗೆ ಹಾನಿ

    ಪುತ್ತೂರು ಜುಲೈ 18: ಚಲಿಸುತ್ತಿದ್ದ ರೈಲಿನ ಮೇಲೆ ಧರೆ ಕುಸಿದು ರೈಲಿನ ಎದುರಿನ ಗಾರ್ಡ್ ಗೆ ಹಾನಿಯಾಗಿರುವ ಘಟನೆ ಪುತ್ತೂರು ಕಬಕ -ಸುಬ್ರಹ್ಮಣ್ಯ ರೈಲ್ವೇ ಹಳಿಯ ನಡುವೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ನಡೆದಿದೆ.


    ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗಾಂಧಿಧಾಮ್ – ನಾಗರ್ ಕೊಯಿಲ್ ಏಕ್ಸ್ ಪ್ರೆಸ್ ರೈಲು ಈ ಹಳಿಯಲ್ಲಿ ಹಾದು ಹೋಗುತ್ತಿದ್ದಾಗ ಏಕಾ ಏಕಿ ಧರೆ ಕುಸಿದಿದ್ದು,ಮಣ್ಣು ರೈಲು ಎಂಜಿನ್ ನ ಮುಂಭಾಗಕ್ಕೆ ಕುಸಿದಿದ್ದು,ರೈಲಿನ ಗಾರ್ಡ್ ಗೆ ಹಾನಿಯಾಗಿದೆ.


    ರೈಲು ಈಗ ಹಳಿಯಲ್ಲಿ ಬಾಕಿಯಾಗಿದ್ದು,ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು,ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply