DAKSHINA KANNADA
ಪುತ್ತೂರು – ಭಾರೀ ಮಳೆಗೆ ಮನೆ ಮೇಲೆ ಕುಸಿದ ಧರೆ ಮಣ್ಣಿನಡಿ ಸಿಲುಕಿದ್ದ ಮಕ್ಕಳ ರಕ್ಷಣೆ ಮಾಡಿದ ಅಪ್ಪ

ಪುತ್ತೂರು ಜೂನ್ 27: ಕರಾವಳಿಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಪುತ್ತೂರಿನಲ್ಲಿ ಭಾರೀ ಮಳೆಗೆ ಮನೆ ಮೇಲೆ ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಇಲ್ಲಿಗೆ ಸಮೀಪದ ಬನ್ನೂರಿನ ಜೈನರಗುರಿ ಎಂಬಲ್ಲಿ ಭಾರಿ ಮಳೆಯಿಂದಾಗಿ ಮಜೀದ್ ಎಂಬುವರ ಮನೆ ಮೇಲೆ ಧರೆ ಕುಸಿದು, ಗುರುವಾರ ನಸುಕಿನಲ್ಲಿ ಗೋಡೆ ನೆಲಕ್ಕುರುಳಿದೆ. ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ತಂದೆಯೇ ರಕ್ಷಣೆ ಮಾಡಿದ್ದಾರೆ.
ಮಜೀದ್ ತಮ್ಮ ಇಬ್ಬರು ಮಕ್ಕಳ ಜೊತೆ ಮನೆಯ ಕೊಠಡಿಯಲ್ಲಿ ಮಲಗಿದ್ದರು. ಅವರು ನಿದ್ದೆಯಲ್ಲಿದ್ದಾಗ ಮನೆ ಪಕ್ಕದ ಧರೆಯೊಂದು ಸಡಿಲಗೊಂಡು ಮನೆ ಮೇಲೆ ಬಿದ್ದಿತ್ತು. ಇದರಿಂದ ಮನೆಯ ಗೋಡೆ ನೆಲಸಮವಾಗಿತ್ತು. ಕೊಠಡಿ ಮೇಲೆ ಬಿದ್ದ ಮಣ್ಣು ಬಿದ್ದ ತಕ್ಷಣ ಎಚ್ಚೆತ್ತ ಮಜೀದ್, ಇಬ್ಬರು ಮಕ್ಕಳನ್ನ ಪಾರು ಮಾಡಿದರು.

ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆವರೆಗೆ ಭಾರಿ ಮಳೆಯಾಗಿದೆ. ಅನೇಕ ಕಡೆ ಮಣ್ಣುಕುಸಿತ ಉಂಟಾಗಿದೆ.