ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರಂಭವಾದ ಗುಡ್ಡ ಕುಸಿತ ಮಣ್ಣುಪಾಲಾದ ಮೂರು ಮನೆಗಳು

ಮಂಗಳೂರು ಅಗಸ್ಟ್ 17: ದಕ್ಷಿಣಕನ್ನಡ ಜಿಲ್ಲೆಯ ಸಂಪಾಜೆ ಘಾಟ್ ಬಳಿಯ ಜೋಡುಪಾಳದಲ್ಲಿ ಗುಡ್ಡ ಕುಸಿತ ಉಂಟಾಗಿ 3 ಮನೆಗಳು ಸಂಪೂರ್ಣ ಮಣ್ಣುಪಾಲಾಗಿರುವ ಘಟನೆ ನಡೆದಿದೆ.

ಸಂಪಾಜೆ ಯಿಂದ ಮಡಿಕೇರಿಗೆ ಸಾಗುವ ಮಾರ್ಗ ಮದ್ಯದ ಜೋಡುಪಾಲ ಎಂಬಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಇಂದು ಏಕಾಏಕಿ ಗುಡ್ಡ ಜರಿದು ಬಿದ್ದಿದೆ. ಈ ಪರಿಣಾಮ ಮೂರು ಮನೆಗಳು ಮಣ್ಣಿನಡಿ ಸಿಲುಕಿ ಧ್ವಂಸ ಗೊಂಡಿವೆ . ಈ ಘಟನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಬಸಪ್ಪ ಎಂದು ಗುರುತಿಸಲಾಗಿದೆ.

ಇಬ್ಬರು ಮಕ್ಕಳು ಹಾಗು ಮಹಿಳೆ ಯೊಬ್ಬರು ಮಣ್ಣಿನಡಿಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಣ್ಣಿನಡಿಗೆ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ಆರಂಭವಾಗಿದೆ.

ಮೃತ ಬಸಪ್ಪ ಅವರ ಪತ್ನಿ ಹಾಗು ಇಬ್ಬರು ಮಕ್ಕಳು ಕೂಡ ಮಣ್ಣಿನಡಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಮಣ್ಣಿನಡಿ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ಆರಂಭವಾಗಿದೆ. ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡ ತಲುಪಿದ್ದು ರಕ್ಷಣಾ ಕಾರ್ಯ ಆರಂಭಿಸಲಾಗಿದೆ. ಸ್ಥಳಕ್ಕೆ ಸುಳ್ಯ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ.

ನಿನ್ನೆಯಿಂದಲೇ ಜೋಡುಪಾಲದ ಮೇಲ್ ಮೇಲ್ಭಾಗದ ಈ ಗುಡ್ಡ ಜಾರು ತೊಡಗಿತ್ತು ಇದಕ್ಕಾಗಿ ಇಲ್ಲಿರುವ ಮನೆಗಳ ನಿವಾಸಿಗಳನ್ನು ಪಕ್ಕದ ಶಾಲೆಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿತ್ತು. ಈ ನಡುವೆಯೇ ಗುಡ್ಡ ಕುಸಿದಿದೆ ಎಂದು ಹೇಳಾಗಿದೆ. ಗುಡ್ಡ ಸಂಪೂರ್ಣ ಜಾರಿದ ಪರಿಣಾಮ 3 ಮನೆಗಳು ನಾಶ ವಾಗಿವೆ. ರಸ್ತೆಯಿಡೀ ನೀರು ಹರಿದು ಬರುತ್ತಿದ್ದು ಸುಮಾರು ಮೂರು ಕಿಲೋಮೀಟರ್ ನಷ್ಟು ವಾಹನವಾಗಲಿ ಜನರಾಗಲಿ ಹೋಗಲು ಸಾಧ್ಯವಿಲ್ಲದಂತಹ ಪರಿಸ್ಥತಿ ನಿರ್ಮಾಣವಾಗಿದೆ.

Facebook Comments

comments